ಕೊಕ್ರಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಗುರುವಾಯನಕೆರೆ ಜನಮಂಗಳ ಕಾರ್ಯಕ್ರಮದಡಿ ನಾರಾವಿ ವಲಯ, ಕೊಕ್ರಾಡಿ-ಸಾವ್ಯ ಕಾರ್ಯಕ್ಷೇತ್ರದ ಕೊಕ್ರಾಡಿ ಒಕ್ಕೂಟದ ಸದಸ್ಯೆಯಾದ ಶ್ರೀಮತಿ ಚಂದ್ರಾವತಿ ರವರ ಪತಿ ಸುಂದರ ಪೂಜಾರಿ ವಿಶೇಷ ಚೇತನರಿಗೆ ಹಾಗೂ ಕೊಕ್ರಾಡಿ ಸಾವ್ಯ ಕಾರ್ಯಕ್ಷೇತ್ರದ ಸಾವ್ಯ ಒಕ್ಕೂಟದ ಸದಸ್ಯೆ ಉಮಾಪತಿ ರವರ ಮಾವ ಕಾಡ್ಯ ಮೂಲ್ಯ ವಿಶೇಷ ಚೇತನರಿಗೆ ಕೊಮ್ಮಡೊ ವ್ಹೀಲ್ ಚೇರ್ ನ್ನು ಮೇಲ್ವಿಚಾರಕರು ವಿಶಾಲ ಕೆ. ವಿತರಣೆ ಮಾಡಿದರು.





