ನಾರಾವಿ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಅವರಿಂದ ಕಾರ್ಕಳ-ನಾರಾವಿ ಮುಖ್ಯ ರಸ್ತೆಯ ಬಿರ್ಮೊಟ್ಟು ಉಮಾಮಹೇಶ್ವರ ಪೆಟ್ರೊಲ್ ಪಂಪ್ ಬಳಿ ಮೇ 8ರಂದು ಸಂಜೆ 6-00 ಗಂಟೆಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಉಮಾಮಹೇಶ್ವರ ಎಂಟರ್ ಪ್ರೈಸಸ್ (ಎಂ.ಆರ್.ಪಿ.ಎಲ್ ಪೆಟ್ರೋಲ್ ಪಂಪ್)ನ ಒಂದನೇ ವರ್ಷದ ಸಂಭ್ರಮದಲ್ಲಿ ಶ್ರೀಮತಿ ದೀಪಾ-ದೇವೇಂದ್ರ ಹೆಗ್ಡೆ ಕೊಡಂಗೆಗುತ್ತು ಕೊಕ್ರಾಡಿ ಮತ್ತು ಶ್ರೀಮತಿ ಅಶ್ವಿನಿ-ನವೀನ್ ಎನ್. ಹೆಗ್ಡೆ ಮೂಡಬಿದಿರೆ ಅವರು ಸೇವೆಯಾಗಿ ಯಕ್ಷಗಾನವನ್ನು ಆಡಿ ತೋರಿಸುತ್ತಿದ್ದಾರೆ.





