ನಾರಾವಿ: ಶ್ರೀ ಸೂರ್ಯ ಫ್ರೆಂಡ್ಸ್ (ರಿ.) ಮಂಚಕಲ್ಲು ಅರಸಕಟ್ಟೆ ನಾರಾವಿ ಇದರ ೪ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ನಾರಾವಿಯ ಉದ್ಯಮಿ ಚಂದ್ರಶೇಖರ ಜಾರೋಡಿ ಅವರು ಆ. 9ರಂದು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಂದೇಶ್ ದೇವಾಡಿಗ, ಗೌರವಾಧ್ಯಕ್ಷರಾದ ಪ್ರವೀಣ್ ದೇವಾಡಿಗ, ಗೌರವ ಸಲಹೆಗಾರರಾದ ವಸಂತ ಆಚಾರ್ಯ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.





