ಬೆಳ್ತಂಗಡಿ: ಸರಸ್ವತಿ ಆಂಗ್ಲಮಾಧ್ಯಮ ಶಾಲೆ ಮುಂಡಾಜೆಯಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೆಳ್ತಂಗಡಿ ಎಸ್ ಡಿಎಂ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿ ಗಳಿಸಿಕೊಂಡಿದ್ದಾರೆ.
ಶ್ರೀ ರಕ್ಷಾ 9ನೇ ಜಾನಪದ ಗೀತೆ ಪ್ರಥಮ, ಪ್ರಾಪ್ತಿ ವಿ ಶೆಟ್ಟಿ 9ನೇ ಭರತನಾಟ್ಯ ಪ್ರಥಮ, ಬೃಂದಾ ಎಸ್ 9ನೇ ಚಿತ್ರಕಲೆ ಪ್ರಥಮ, ಯಶ್ವಿತಾ 10ನೇ ಗಝಲ್ ಪ್ರಥಮ, ಜಾನಪದ ನೃತ್ಯ ಪ್ರಥಮ (ಪೂರ್ವಿ, ತೇಜಸ್ ರಿದು, ಶ್ರೀರಕ್ಷಾ, ಪ್ರಾಪ್ತಿ, ಸಂಜನಾ) ಕವ್ವಾಲಿ ಪ್ರಥಮ (ಅನಘ ಮರಾಠ, ಶ್ರೀ ನಂದನ್, ನಿದೀಶ್, ಸಹನಾ, ರಿಷಿತ,ಶ್ರೇಯಸ್ ) ಧಾರ್ಮಿಕ ಪಠಣ ಸಂಸ್ಕೃತ ಅನಘ ಮರಾಠಿ 10ನೇ ದ್ವಿತೀಯ, ಧಾರ್ಮಿಕ ಪಠಣ ಅರೇಬಿಕ್ ಅಮನ್ ಶೇಕ್ 10ನೇ ದ್ವಿತೀಯ, ಹಿಂದಿ ಭಾಷಣ ರಿತಿಕಾ 9ನೇ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.









