ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಮ್ಮ ದೇಶದ ಶ್ರೇಷ್ಠ ಕಲೆಯಾದ ಯಕ್ಷಗಾನವನ್ನು ರಾಜ್ಯದ ಕಲೆಯಾಗಿ ಘೋಷಿಸಬೇಕೆಂದು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರು ಕಲಾವಿದರು ಹಾಗೂ ಕಲಾಭಿಮಾನಿಗಳ ಪರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದಂತಹ ಮಾನ್ಯ ಯು ಟಿ ಖಾದರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಮನವಿಯನ್ನು ಸ್ವೀಕರಿಸಿದ ಸಚಿವರು ತಮ್ಮ ಬೇಡಿಕೆಯನ್ನು ಪೂರೈಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂಬುದಾಗಿ ಭರವಸೆಯಿತ್ತಿದ್ದಾರೆ.
ಸಾವಿರ ವರ್ಷಗಳ ಇತಿಹಾಸವಿರುವ, ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಗಳಿಸಿದಂತಹ, ಜಾತಿ, ಮತ, ಪಂಥವಿಲ್ಲದೆ ಸರ್ವರ ಮನಸ್ಸನ್ನು ಗೆದ್ದಂತಹ ಈ ನಮ್ಮ ಯಕ್ಷಗಾನ ಕಲೆ ಇದು ರಾಜ್ಯದ ಕಲೆಯಾಗಿ ಘೋಷಣೆಯಾದರೆ ಇದೊಂದು ಇತಿಹಾಸವಾಗಲಿದೆ.





