ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ಗುರುವಾಯನಕೆರೆ ನಾರಾವಿ ವಲಯದ ನಾರಾವಿ ಎ ಮತ್ತು ಬಿ ಕಾರ್ಯಕ್ಷೇತ್ರದ ಒಕ್ಕೂಟಗಳ ತ್ರೈಮಾಸಿಕ ಸಭೆಯಲ್ಲಿ ನಾರಾವಿ ವಲಯದ ೧೫೧ ಹೊಸ ಸದಸ್ಯರ ಸೇರ್ಪಡೆ ಮತ್ತು ಜನಮಂಗಲ ಕಾರ್ಯಕ್ರಮಗಳ ಉದ್ಘಾಟನೆಯನ್ನು ನಾರಾವಿ ಜಿನಬಸದಿಯ ಆಡಳಿತ ಮೊಕ್ತೇಸರರಾದ ನಿರಂಜನ್ ಅಜ್ರಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಚೇತನರಾದ ಶಿವಣ್ಣ ದೇವಾಡಿಗ ಇವರಿಗೆ ಕೊಮೊಡೊ ವ್ಹೀಲ್ ಚೇರ್ ವಿತರಣೆ ಹಾಗೂ ೬೬ ವರ್ಷ ಮೇಲ್ಪಟ್ಟ ಒಕ್ಕೂಟಗಳ ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಸಂಘಕ್ಕೆ ಹೊಸಸೇರ್ಪಡೆ ಆದ ಹೊಸ ಸದಸ್ಯರನ್ನು ಒಕ್ಕೂಟಕ್ಕೆ ಸ್ವಾಗತಿಸಲಾಯಿತು. ಗಂಭೀರ ಆರೋಗ್ಯ ಸಮಸ್ಯೆಯಲ್ಲಿದ್ದ ಕುತ್ಲೂರು ಧರ್ಣಪ್ಪ ಪೂಜಾರಿ ಅವರಿಗೆ ರೂ. ೩೦೦೦೦ ಕ್ರಿಟಿಕಲ್ ಫಂಡ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸದಾನಂದ ಬಂಗೇರ, ವಲಯ ಸಂಚಾಲಕರಾದ ವಸಂತ್ ಭಟ್, ಮುಖ್ಯ ಅತಿಥಿಗಳಾಗಿ ರುಡ್ ಸೆಟ್ ಸಂಸ್ಥೆಯ ಕರುಣಾಕರ ಜೈನ್ ಅವರು ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದgರು.
ವೇಣೂರು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮೋಹನ್ ಕುಮಾರ್, ರಾಕೇಶ್, ತಾಲೂಕು ಜನಜಾಗೃತಿ ಸದಸ್ಯರಾದ ವಸಂತ್ ಗುಣನಿಲ ಮತ್ತಿತರರು ಉಪಸ್ಥಿತರಿದ್ದರು.
ವಲಯದ ವಲಯಾಧ್ಯಕ್ಷರಾದ ಶೇಖರ್ ಹೆಗ್ಡೆ, ತಾಲೂಕು ಯೋಜನಾಧಿಕಾರಿಯಾದ ಅಶೋಕ್ ಬಿ. ಅವರು ಯೋಜನೆಯು ನಡೆದು ಬಂದ ದಾರಿಯನ್ನು ವಿಸ್ತಾರವಾಗಿ ತಿಳಿ ಹೇಳಿದರು. ಗ್ರಾಮ ಸಮಿತಿ ಅಧ್ಯಕ್ಷರಾದ ಜಗದೀಶ್ ಹೆಗ್ಡೆ, ನಾರಾವಿ ಬಿ ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್, ಮರೋಡಿ ಬಿ ಒಕ್ಕೂಟದ ಅಧ್ಯಕ್ಷರಾದ ರಾಜು ಪೂಜಾರಿ, ನಾರಾವಿ ಅಷಾ, ಮತ್ತು
ನಾರಾವಿ ಎ ಮತ್ತು ಬಿ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ಎಲ್ಲಾ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
ನಾರಾವಿ ವಲಯ ಮೇಲ್ವಿಚಾರಕರು ವಿಶಾಲ ಕೆ. ಕಾರ್ಯಕ್ರಮ ನಿರೂಪಣೆ ಮಾಡಿದರು. ನಾರಾವಿ ಸೇವಾ ಪ್ರತಿನಿಧಿ ಹರಿಣಾಕ್ಷಿ ಸ್ವಾಗತಿಸಿ, ಸೇವಾ ಪ್ರತಿನಿಧಿ ರೇಷ್ಮಾ ಜೈನ್ ಅವರು ವಂದನಾರ್ಪಣೆ ಸಲ್ಲಿಸಿದರು.









