ವೇಣೂರು: ಯಕ್ಷ ಶಿಕ್ಷಣ ಕಲಾಕೇಂದ್ರ ವೇಣೂರು, ಸೇವಾ ಶರಧಿ ವಿಶ್ವಸ್ತ ಮಂಡಳಿ (ರಿ) ವೇಣೂರು ಇದರ ಆಶ್ರಯದಲ್ಲಿ ಜು. 4ರಿಂದ ವೇಣೂರಿನಲ್ಲಿ ಯಕ್ಷಗಾನ ನಾಟ್ಯ ತರಬೇತಿ ನಡೆಯಲಿದೆ.
ಈ ಯಕ್ಷಗಾನ ತರಬೇತಿಯನ್ನು ಮಕ್ಕಳಿಗೆ ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸಲಾಗುತ್ತಿದ್ದು, ಖ್ಯಾತ ಹಿರಿಯ ಯಕ್ಷಗಾನ ಕಲಾವಿದ ಸದಾಶಿವ ಕುಲಾಲ್ ಅವರು ಗುರುಗಳಾಗಿ ತರಬೇತಿ ನೀಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ 7899636144, 9686022071 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.



