ವೇಣೂರು: ವೇಣೂರು ಗ್ರಾಮ ಪಂಚಾಯತ್ನ ಪ್ರಸ್ತುತ ಅವಧಿ ಮುಕ್ತಾಯಗೊಳ್ಳಲು ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಇದ್ದು, ಶುಕ್ರವಾರ ನಡೆದ ಕೊನೆಯ ಸಾಮಾನ್ಯ ಸಭೆಯು ಸನ್ಮಾನ ಹಾಗೂ ನೆನಪಿನ ಕ್ಷಣಗಳಿಗೆ ಸಾಕ್ಷಿಯಾಯಿತು.
ಶೀಘ್ರದಲ್ಲೇ ಆಡಳಿತಾಧಿಕಾರಿ ನೇಮಕಗೊಳ್ಳಲಿರುವ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗದಿಂದ ಸದಸ್ಯರಿಗೆ ಗೌರವ ಸಮರ್ಪಣೆ ಮತ್ತು ಫೋಟೋ ಶೂಟ್ ಆಯೋಜಿಸಲಾಗಿತ್ತು. ಈ ನಡುವೆ ಪಂಚಾಯತ್ ಸದಸ್ಯ ಅನೂಪ್ ಅವರು ಸಾಂಪ್ರದಾಯಿಕ ತುಳುವ ಶಾಲು ಧರಿಸಿ ಆಗಮಿಸುವ ಮೂಲಕ ಸಭೆಯಲ್ಲಿ ಎಲ್ಲರ ಗಮನ ಸೆಳೆದರು.



ಇನ್ನು ಮೂರೇ ದಿನಗಳಲ್ಲಿ ಆಡಳಿತಾಧಿಕಾರಿ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಎಲ್ಲಾ ಸದಸ್ಯರನ್ನು ಗೌರವಿಸಿ ಬೀಳ್ಕೊಟ್ಟರು. ಈ ನಡುವೆ, ಪಂಚಾಯತ್ ಸದಸ್ಯ ಅನೂಪ್ ಅವರು ತುಳುನಾಡಿನ ಹೆಮ್ಮೆಯ ಸಂಕೇತವಾದ ತುಳುವ ಶಾಲು ಹೊದ್ದು ಸಭೆಗೆ ಆಗಮಿಸಿ, ಇಡೀ ಸದನದ ವಿಶೇಷ ಆಕರ್ಷಣೆಯ ಕೇಂದ್ರಬಿಂದುವಾದರು. ತುಳುಭಾಷೆಗೆ ಸ್ಥಾನಮಾನ ಹಿನೈಲೆಯಲ್ಲಿ ತುಳುವ ಶಾಲನ್ನು ಹಾಕಿ ಸಭೆಗೆ ಆಗಮಿಸಿದ್ದ ಅನೂಪ್ ಪಾಯಸ್ ಅವರು ಯಾನ್ ನಮ ಮಾತ ತುಳುವ ಅಪ್ಪೆನ ಜೋಕುಲು ಎ೦ದು ತುಳುವಿನಲ್ಲಿ ಮಾತನಾಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಜೈ ತುಳುನಾಡ್ ಎ೦ದು ಘೋಷಣೆ ಕೂಗಿದರು.



