ವೇಣೂರು: ಬಜಿರೆ ಗ್ರಾಮದ ಮುದ್ದಾಡಿ ಶ್ರೀ ಮಾರವಾಂಡಿ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೆ ನೇಮೋತ್ಸವವು ಎ. 23 ಮತ್ತು 24ರಂದು ನಡೆಯಲಿದೆ.
ಎ. 23ರಂದು ಸಂಜೆ ಗುತ್ತುಗಳಿಂದ ಭಂಡಾರ ಆಗಮನವಾಗಿ ಧ್ವಜಾರೋಹಣ, ಶ್ರೀ ಬಲಿ ಉತ್ಸವ ನಡೆಯಲಿದೆ. ಬಳಿಕ ಶ್ರೀ ಮಾರವಾಂಡಿ, ಶ್ರೀ ಕೊಡಮಣಿತ್ತಾಯ, ಶ್ರೀ ಮೈಸಂದಾಯ ಹಾಗೂ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಎ. 24ರಂದು ರಾತ್ರಿ ಶ್ರೀ ಬಲಿ ಉತ್ಸವ, ರಾತ್ರಿ 9-00 ಗಂಟೆಯಿಂದ ಶ್ರೀ ಬ್ರಹ್ಮ ಬೈದರ್ಕಳ ಮತ್ತು ಮಾಣಿಬಾಲೆ ನೇಮೋತ್ಸವ ಜರಗಲಿದೆ. ಈ ವಾರ್ಷಿಕ ನೇಮೋತ್ಸವವು ಕ್ಷೇತ್ರದ ಆಡಳಿತ ಮೊಕ್ತೇಸರರು, ಅಸ್ರಣ್ಣರು, ಗುರಿಕಾರರ ಸಮ್ಮುಖದಲ್ಲಿ ನಡೆಯಲಿದ್ದು, ವಿವಿಧ ಗ್ರಾಮದ ಭಕ್ತಾಧಿಗಳು ಆಗಮಿಸಿ ಗಂಧ ಪ್ರಸಾದ ಸ್ವೀಕರಿಸುತ್ತಾರೆ.





