ವೇಣೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಅಭಾವ ದಿನೇ ದಿನೇ ಹೆಚ್ಚಾಗುತ್ತಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಲೇ ಇದೆ. ನಿರಂತರ ಸುರಿಯುತ್ತಿದ್ದ ಮಳೆಯಿಂದ ವೇಣೂರು ಫಲ್ಗುಣಿ ನದಿ ಹುಕ್ಕಿ ಹರಿದಿದೆ. ಪರಿಣಾಮವಾಗಿ ವೇಣೂರು ಚರ್ಚ್ ಬಳಿ ರಾಜ್ಯಹೆದ್ದಾರಿಗೆ ನಿನ್ನೆ ಸಂಜೆ ನೀರು ನುಗ್ಗಿ ಹೆದ್ದಾರಿ ಕೆಲವೊತ್ತು ಸಂಚಾರ ಸ್ಥಿಗಿತಗೊಂಡಿತು. ಸ್ಥಳೀಯರು ಹಾಗೂ ಇಲ್ಲಿಯ ವಾಹನ ಚಾಲಕರು ಕೆಲ ವಾಹನಗಳಿಗೆ ಸಂಚರಿಸುವಲ್ಲಿ ಸಹಕರಿಸಿದರು.

ತಗ್ಗುಪ್ರದೇಶದ ಅಡಿಕೆ ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ಇಂದು ರವಿವಾರ ಬೆಳಿಗ್ಗೆ ನದಿಯಲ್ಲಿ ನೀರಿನ ಅರಿವು ಪ್ರಮಾಣ ಸ್ವಲ್ಪಮಟ್ಟಿಗೆ ಇಳಿಕೆಯಾಗಿದ್ದು, ಹೆದ್ದಾರಿ ಸಂಚಾರ ಸುಗಮವಾಗಿದೆ.
ಭಾರತೀಯ ಹವಾಮಾನ ಇಲಾಖೆ, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಮಳೆ ಬೀಸುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದೆ. ಅಲ್ಲದೇ ಜನರಿಗೆ ಮನೆಗಳಲ್ಲೇ ಇರಲು ಸಲಹೆ ನೀಡಿದ. ಮರಗಳ ಕೆಳಗೆ ಆಶ್ರಯ ಪಡೆಯದಂತೆ, ನದಿ-ಕೆರೆಗಳಂತಹ ಪ್ರದೇಶಗಳಿಂದ ಆದಷ್ಟು ದೂರವಿರುವಂತೆ ಸೂಚನೆ ನೀಡಲಾಗಿದೆ.



