ಬೆಳ್ತಂಗಡಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸಿದ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದ್ದು, ಬೆಳ್ತಂಗಡಿ ತಾಲೂಕಿನ ವೇಣೂರಿನ ದೀಪಕ್ ಹೆಗ್ಡೆ 28ನೇ ರ್ಯಾಂಕ್ ಪಡೆದಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಬಜಿರೆ ಸರಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣ ಮತ್ತು ಬಿಕಾಂ ಪದವಿ ಶಿಕ್ಷಣವನ್ನು ಆಳ್ವಾಸ್ ಕಾಲೇಜಿನಲ್ಲಿ ಮಾಡಿದ್ದರು. ಬಳಿಕ ಸಿಎ ಇಂಟರ್ಶಿಪನ್ನು ಆಳ್ವಾಸ್ ಕಾಲೇಜಿನಲ್ಲಿ ಮುಗಿಸಿದ್ದು, ಮಂಗಳೂರಿನ ಗಣೇಶ್ ಸುಧೀರ್ ಅವರಲ್ಲಿ ಸಿಎ ತರಬೇತಿ ಪಡೆದಿದ್ದರು. ಬಜಿರೆ ಗ್ರಾಮದ ಮುದ್ದಾಡಿ ನಿವಾಸಿ ದಿವಾಕರ ಹೆಗ್ಡೆ ಮತ್ತು ಶ್ರೀಮತಿ ನಳಿನಿ ಹೆಗ್ಡೆ ದಂಪತಿಯ ಪುತ್ರ.



