ವರದಿ ಮಾಡಿ ಗಮನ ಸೆಳೆಸಿದ್ದ ನ್ಯೂಸ್ 19 ಕನ್ನಡ
ವೇಣೂರು: ಮುಖ್ಯಪೇಟೆಯಲ್ಲೇ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿದ್ದ ಗುಂಡಿಗಳನ್ನು ವೇಣೂರು ಗ್ರಾ.ಪಂ. ಸದಸ್ಯರು ಗುತ್ತಿಗೆದಾರರ ಮೂಲಕ ಮುಚ್ಚಿಸುವ ಕಾರ್ಯ ಮಾಡಿದ್ದಾರೆ.
ಡಿ. 10ರಂದು ನ್ಯೂಸ್ 19 ಕನ್ನಡ ವೇಣೂರು ಹೆದ್ದಾರಿ.. ಏನು ಹೊಂಡರೀ.. ಅನ್ನುವ ಶಿರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ಇದನ್ನು ವೇಣೂರು ಗ್ರಾ.ಪಂ.ನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾಗಿರುವ ನೇಮಯ್ಯ ಕುಲಾಲ್ ಅವರು ಪಿಡಬ್ಲ್ಯೂಡಿ ಗುತ್ತಿಗೆದಾರ ನಜೀರ್ ಅವರಲ್ಲಿ ದುರಸ್ತಿ ನಡೆಸಿಕೊಡುವಂತೆ ವಿನಂತಿಸಿದ್ದು, ಅದರಂತೆ ಇಂದು ಮುಖ್ಯಪೇಟೆಯ ಹೆದ್ದಾರಿ ಗುಂಡಿಗಳನ್ನು ಮುಚ್ಚಿ ಡಾಮಾರು ಹಾಕಲಾಗಿದೆ.





