ವೇಣೂರು: ಗುಂಡೂರಿ ಗ್ರಾಮದ ತುಂಬೆದಲೆಕ್ಕಿ ಡಿ. 18ರಂದು ಚಾಲನೆಗೊಂಡ ದೊಂಪದಬಲಿ ನೇಮೋತ್ಸವವು ಸಾಂಪ್ರದಾಯಿಕ ಕಟ್ಟುಕಟ್ಟಲೆಯಂತೆ ವಿಜೃಂಭನೆಯಿಂದ ನಡೆದು ಇಂದು ಸಂಪನ್ನಗೊಂಡಿತು.
ಡಿ. 19ರಂದು ಕುಂಞಡಿ ಅಸ್ರಣ್ಣರಾದ ಲಕ್ಷ್ಮೀನಾರಾಯಣ ಕಾರಂತರ ನೇತೃತ್ವದಲ್ಲಿ ನವಕ ಕಲಶಾಭಿಷೇಕ, ಪಂಚಪರ್ವ ಸೇವೆ ಜರಗಿತು. ಸಂಜೆ ಗುತ್ತುಗಳಿಂದ ಭಂಡಾರ ಬಂದು ಶ್ರೀ ಮಾರವಾಂಡಿ, ಶ್ರೀ ಕೊಡಮಣಿತ್ತಾಯ, ಶ್ರೀ ಮೈಸಂತಾಯ, ಹಾಗೂ ಕಲ್ಲುಡ-ಕಲ್ಲುರ್ಟಿ ದೈವಗಳಿಗೆ ಬಲಿ ನೇಮೋತ್ಸವವು ಆಡಳಿತ ಮೊಕ್ತೇಸರರಾದ ಶ್ರೀಮತಿ ರಾಜೇಶ್ವರಿ ವಿಜಯರಾಜ ಅಧಿಕಾರಿ ಮಾರಗುತ್ತು, ಸುರೇಶ್ ಆರಿಗ ಪೆರ್ಮಾಣುಗುತ್ತು ಅವರ ಉಪಸ್ಥಿತಿಯಲ್ಲಿ ನಡೆಯಿತು.
ಗ್ರಾಮಗಳ ಗುರಿಕಾರರುಗಳಾದ ಪ್ರವೀಣ್ಚಂದ್ರ ಜಂತೋಡಿಗುತ್ತು, ಅಜಿತ್ ಕುಮಾರ್ ಡೆಕ್ಕಣ, ಜೀವಂಧರ ಅಜ್ರಿ ಪಾಪುದಡ್ಕ, ಯುವರಾಜ ಕಡಂಬ ಬಜಿರೆಗುತ್ತು, ಅರುಣ್ ಹೆಗ್ಡೆ ಬೆಳೆದಡೆ, ಪ್ರಭಾಕರ ಹೆಗ್ಡೆ ಹಟ್ಟಾಜೆ, ಹರೀಶ್ಚಂದ್ರ ಪೂಜಾರಿ ಬಜಿರೆ, ಶ್ರೀಧರ ಪೂಜಾರಿ ಮಾರು, ಸುಂದರ ಪೂಜಾರಿ ಕೊಯಂದೂರು, ವಿಜಯ ಹೊಸಪಟ್ಣ, ಸೇಸಪ್ಪ ಪೂಜಾರಿ ಕೊಯಂದೂರು, ದಿನೇಶ್ ಪೂಜಾರಿ ಪರತ್ಯಾರು, ಸದಾನಂದ ಪೂಜಾರಿ ಕುಂಞಡಿ, ರಾಜು ಪೂಜಾರಿ ಬಾಡಾರು ಹಾಗೂ ವಿವಿಧ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.






