ವೇಣೂರು: ಯುವ ಸೇವಾ ಸಂಗಮ ಸೇವಾ ಟ್ರಸ್ಟ್ (ರಿ.) ವೇಣೂರು ಇದರ ಸಾರಥ್ಯದಲ್ಲಿ ವೇಣೂರಿನ ಎಕ್ಸೆಲ್ ಟೆಕ್ನೋ ಸ್ಕೂಲ್ ವಿದ್ಯೋದಯ ಕ್ಯಾಂಪಸ್ನಲ್ಲಿ ಬೃಹತ್ ಉಚಿತ ಆರೋಗ್ಯ-ದಂತ ಮತ್ತು ಆಯುರ್ವೇದ ಚಿಕಿತ್ಸಾ ಶಿಬಿರ ಮತ್ತು ರಕ್ತದಾನ ಶಿಬಿರವು ಡಿ. 21ರಂದು ಬೆಳಿಗ್ಗೆ ಗಂಟೆ 8-30 ರಿಂದ ಮಧ್ಯಾಹ್ನ ಒಂದು ಗಂಟೆಯ ತನಕ ನಡೆಯಲಿದೆ.
ಕೆಎಂಸಿ ಆಸ್ಪತ್ರೆ ಅತ್ತಾವರ ಜ್ಯೋತಿ ಮಂಗಳೂರು, ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಮತ್ತು ಬ್ಲಡ್ ಸೆಂಟರ್ ಕೆ.ಎಂ.ಸಿ ಮಂಗಳೂರು ಇದರ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ವೇಣೂರು, ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವೇಣೂರು, ಯುವಕ ಮಂಡಲ ಯುವತಿ ಮಂಡಲ ವೇಣೂರು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಲ್ಗುಣಿ ಸೇವಾ ಸಂಘ, ಕಾಟಿ ಅಭಿಮಾನಿ ಬಳಗ, ಸೇವಾ ಶರದಿ ವಿಶ್ವಸ್ಥ ಮಂಡಳಿ, ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಬೆಳ್ತಂಗಡಿ ವರ್ತಕರ ಸಂಘ, ಲಯನ್ಸ್ ಕ್ಲಬ್ ವೇಣೂರು ಶ್ರೀ ರಾಮ ಭಜನಾ ಮಂಡಳಿ ನಡ್ತಿಕಲ್ಲು, ಹಾಲು ಉತ್ಪಾದಕರ ಸಹಕಾರಿ ಸಂಘ ಗುಂಡೂರಿ ಇವರ ಸಹಕಾರದೊಂದಿಗೆ ಈ ಶಿಬಿರ ನಡೆಯಲಿದೆ.
ಖ್ಯಾತ ಹೃದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್, ಹೃದಯ ಸಂಬಂಧಿ ಕಾಯಿಲೆ, ಡಾ. ದೀಪಕ್ ಮಡಿ, ಸಾಮಾನ್ಯ ರೋಗ, ಡಾ. ಆತ್ಮಾನಂದ ಹೆಗ್ಡೆ ಮೂಳೆ ರೋಗ ತಜ್ಞರು, ಡಾ. ಶ್ರೀನಿವಾಸ್ ಪೈ ಶ್ವಾಸಕೋಶ ರೋಗ ತಜ್ಞರು, ಡಾ. ಈಶ್ವರ್ ಕೀರ್ತಿ ಬೆನ್ನು ಮೂಳೆ ತಜ್ಞರು, ಡಾ. ರಮ್ಯಾ ದಂತ ಚಿಕಿತ್ಸಾ ತಜ್ಞರು, ಡಾ. ಭೂಷಣ್ ಶೆಟ್ಟಿ ಕಿಡ್ನಿ ರೋಗ ತಜ್ಞರು, ಡಾ. ಶಂಕರನ್ ನಂಬೋದರಿ ಆಯುರ್ವೇದ ಚಿಕಿತ್ಸೆ, ಡಾ. ಮೇಘನಾ ಮಡಿ ಸಾಮಾನ್ಯ ರೋಗ, ಡಾ. ಜೋಕ್ರಿ ಸ್ಟೋಪರ್ ಕಣ್ಣಿನ ರೋಗ ತಜ್ಞರು, ಡಾ. ರಮಿತ್ ಶೆಟ್ಟಿ ಚರ್ಮರೋಗ ತಜ್ಞರು, ಡಾ. ಸಿಂಚನ ರಕ್ತ ಸಂಬಂಧಿ ಕಾಯಿಲೆ ಮುಂತಾದ ಅನುಭವಿ ವೈದ್ಯರು ಈ ಶಿಬಿರದಲ್ಲಿ ವಿವಿಧ ರೋಗಗಳಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಸಲಹೆಗಳನ್ನು ನೀಡಲಿದ್ದಾರೆ, ಅಗತ್ಯವುಳ್ಳ ನಾಗರಿಕ ಬಂಧುಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೆ. ವಿಜಯ ಗೌಡ ಅಧ್ಯಕ್ಷರು ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ವೇಣೂರು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಿಳಿಸಿದ್ದಾರೆ.






