ವೇಣೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಹಾಗೂ ಪಿ ಎಂ ಶ್ರೀ ಕೆ ಪಿ ಶಾಲೆ ಬಜಿರೆ ಇದರ ಸಹಯೋಗದಲ್ಲಿ ನಡೆದ ಬಜಿರೆ, ನಿಟ್ಟಡೆ ಹಾಗೂ ಪಡ್ಡಂದಡ್ಕ ವಲಯಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಅಲ್ಲದೇ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿರುತ್ತಾರೆ.


4×400 ಮೀ ರಿಲೇಯಲ್ಲಿ ಬಾಲಕಿಯರ ತಂಡ ಹಾಗೂ 4×400 ಮೀ ರಿಲೇಯಲ್ಲಿ ಬಾಲಕರ ತಂಡವೂ ಪ್ರಥಮ ಸ್ಥಾನ ಗಳಿಸಿದೆ.
ಅಲ್ಲದೆ 100 ಮೀ. ಓಟ ಶ್ರೀಮಾ ಪ್ರಥಮ, ದ್ವಿತೀಯ ಸಮರ್ಥ್, 600 ಮೀ. ಓಟ ಪ್ರಥಮ ನಿಶಿತ್, ಶಾಟ್ಪುಟ್ ಪ್ರಥಮ ಧನುಷ್, ಶಾಟ್ಪುಟ್ ಬಾಲಕಿಯವರ ವಿಭಾಗದಲ್ಲಿ ವರ್ಷಿತಾ ಪ್ರಥಮ, 400 ಮೀ. ಓಟದಲ್ಲಿ ಸಮನ್ವಿ ದ್ವಿತಿಯ, ಲಾಂಗ್ಜಂಪ್ನಲ್ಲಿ ಸಮರ್ಥ್ ಪ್ರಥಮ, 400 ಮೀ. ಓಟದಲ್ಲಿ ದ್ವಿತೀಯ ಪ್ರನ್ವಿತ್, ತೃತೀಯ, ನಿಶಿತ್ ಆರ್. ಜೈನ್, ಲಾಂಗ್ಜಂಪ್ ಬಾಲಕಿಯವರ ವಿಭಾಗದಲ್ಲಿ ಶ್ರೀಮಾ ಪ್ರಥಮ, 200 ಮೀ. ಓಟದಲ್ಲಿ ಶ್ರೀಮಾ ಪ್ರಥಮ, ಡಿಸ್ಕ್ ತ್ರೋ ಪ್ರಥಮ ಧನುಷ್, ಹೈಜಂಪ್ ವರುಣ್ ದ್ವಿತೀಯ, ಬಾಲಕಿಯರ ವಿಭಾಗದ ಹೈ ಜಂಪ್ನಲ್ಲಿ ಆಧ್ಯಾ ದ್ವಿತೀಯ, ಚರೀಷ್ಮಾ ತೃತೀಯ, ಹಾರ್ಡೆಲ್ಸ್ ನಲ್ಲಿ ಸಮರ್ಥ್ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.



