ವೇಣೂರು: ಜೀವನದಲ್ಲಿ ಗೆಲುವು ಯಾವತ್ತೂ ಶ್ರೇಯಸ್ಕರ ನಿಜ. ಆದರೆ, ಬದುಕಿನ ಸೋಲುಗಳನ್ನು ಗೆಲುವಾಗಿ ಪರಿವರ್ತಿಸುವನೇ ನಿಜವಾದ ಸಾಧಕ ಎಂದು ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಶೈಲೇಶ್ ಕುಮಾರ್ ಡಿ.ಎಚ್ ಅಭಿಪ್ರಾಯಪಟ್ಟರು.




ನವೆಂಬರ್ 21ರಂದು ಅವರು, ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಇದರ ಎಕ್ಸೆಲ್ ಸ್ಪೋರ್ಟ್ಸ್ ಫಿಯೆಸ್ಟಾ 2026ನ್ನು ಉದ್ಘಾಟಿಸಿ ಮಾತನಾಡಿದರು. ತಮ್ಮ ಮಾತನ್ನು ಮುಂದುವರೆಸುತ್ತಾ ಅವರು, ಸೋತು ಗೆದ್ದವರ ಜೊತೆ ಸ್ವಲ್ಪ ಕಾಲ ನಾವೆಲ್ಲ ವಿರಮಿಸಬೇಕು. ಅಂತವರು ನಮಗೆ ಸ್ಫೂರ್ತಿ ಎಂದರು. ಕುಕ್ಕೇಡಿ ಇಂದಿರಾಗಾಂಧಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳ ಪಥಸಂಚಲನ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸೆಲ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಸುಮಂತ್ ಕುಮಾರ್ ಜೈನ್ ಬಿ ಅವರು, ಕ್ರೀಡಾ ಸಾಧಕರಿಗೂ ಸಮಾಜದಲ್ಲಿ ಉತ್ತಮ ಗೌರವ , ಮನ್ನಣೆ ಇದೆ. ಆ ಕ್ಷೇತ್ರದಲ್ಲಿ ಸಮರ್ಪಕವಾಗಿ ತೊಡಗಿಕೊಂಡಾಗ ಮಾತ್ರ ಜೀವನದ ಗುರಿ ಸಾಧಿತವಾಗುತ್ತದೆ ಎಂದರು.

ವೇದಿಕೆಯಲ್ಲಿ ಎಕ್ಸೆಲ್ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಸಹನಾ ಜೈನ್, ಶಿಕ್ಷಣ ಸಂಯೋಜಕಿ ಕುಮಾರಿ ನಿಶಾ ಪೂಜಾರಿ, ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆ ಇದರ ದೈಹಿಕ ಶಿಕ್ಷಣ ಶಿಕ್ಷಕ ಶ್ರೀಯುತ ಸುಂದರ್ ನಾಯ್ಕ್, ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ ಮುಖ್ಯ ಶಿಕ್ಷಕಿ ಶ್ರೀಮತಿ ವಾಣಿ, ಉಪ ಮುಖ್ಯ ಶಿಕ್ಷಕಿ ಶ್ರೀಮತಿ ಕಾವ್ಯಶ್ರೀ ಎನ್. ಉಪಸ್ಥಿತರಿದ್ದರು. ಶಿಕ್ಷಕರುಗಳಾದ ಶ್ವೇತಾ ಶೆಟ್ಟಿ ಸ್ವಾಗತಿಸಿ, ಕಾವ್ಯ ಶೆಟ್ಟಿ ಧನ್ಯವಾದವಿತ್ತರು. ಮರಿಟಾ ಪ್ರಿಯಾ ಸೆರಾವೋ, ನಿರೂಪಿಸಿ, ಅನ್ವಿತಾ, ರಶ್ಮಿತಾ ದೇವಾಡಿಗ, ಯಶಸ್ವಿನಿ ವಂಶಿಕಾ ಪ್ರಾರ್ಥಿಸಿದರು.
