ವೇಣೂರು: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಉಂಬೆಟ್ಟು ಇಲ್ಲಿಗೆ youth for seva ಸಂಘಟನೆಯ ಮೂಲಕ TEXAS INSTRUMENTS COMPANY ಬೆಂಗಳೂರು ಇವರು ಉಚಿತ ಸ್ಕೂಲ್ ಬ್ಯಾಗ್, ನೋಟ್ ಬುಕ್ ಹಾಗೂ ಕಲಿಕಾ ಉಪಕಾರಣಗಳನ್ನು ಕೊಡುಗೆಯಾಗಿ ನೀಡಿದರು.
TEXAS INSTRUMENTS COMPANY ಸಿಬ್ಬಂದಿ ಕನಸಿಕ್ ಗಿರಿ ಹಾಗೂ ಇತರ ಸಿಬ್ಬಂದಿಗಳು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಯಶೋಧರ ಪೂಜಾರಿ, ಉಪಾಧ್ಯಕ್ಷೆ ಗೀತಾ, ವೇಣೂರು ಗ್ರಾಮ ಪಂಚಾಯತ್ ಸದಸ್ಯರಾದ ವೀಣಾ ದೇವಾಡಿಗ, ಎಸ್ಡಿಎಂಸಿ ಸದಸ್ಯರು ಹಾಗೂ ಪೋಷಕರು ಹಾಜರಿದ್ದರು. ಕಂಪನಿಯಿಂದ ಕಲಿಕಾ ಸಾಮಗ್ರಿಗಳನ್ನು ಒದಗಿಸಿಕೊಡುವಲ್ಲಿ ಸಹಕರಿಸಿದ ಸುಧೀರ್ ರಾವ್ ಅವರನ್ನು ಸ್ಮರಿಸಲಾಯಿತು ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಈ ರೀತಿಯ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಕಾರ್ಯವೆಂದ ಶಾಲಾ ಮುಖ್ಯಶಿಕ್ಷಕಿ ಪದ್ಮಾವತಿ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ರೇಷ್ಮಾ ಆರ್. ವಂದಿಸಿದರು. ಹಿರಿಯ ಶಿಕ್ಷಕಿ ಸುನಂದ ಅವರು ಕಾರ್ಯಕ್ರಮ ನಿರ್ವಹಿಸಿದರು.



