ಕಾರ್ಕಳ : ಚೀನಾದ ಶಾಂಗ್ಲೋದಲ್ಲಿ ಡಿ.3 ರಿಂದ 13 ವರೆಗೆ ನಡೆಯಲಿರುವ ವಿಶ್ವ ಶಾಲಾ ಮಕ್ಕಳ 15 ವರ್ಷ ಒಳಗಿನ ವಯೋಮಿತಿಯ ವಾಲಿಬಾಲ್ ಪಂದ್ಯಾಟದಲ್ಲಿ ಭಾರತದ ಬಾಲಕಿಯರ ತಂಡ ಭಾಗವಹಿಸಲಿದ್ದು, ಈ ತಂಡಕ್ಕೆ ಕಾರ್ಕಳ ಕ್ರೈಸ್ತಕಿಂಗ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆಯಾಗಿದ್ದಾರೆ.
ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಅ.ಅ.24 ರಿಂದ ರಾಂಚಿಯಲ್ಲಿ ನಡೆದ ಅಯ್ಕೆ ತರಬೇತಿ ಶಿಬಿರದಲ್ಲಿ ಅಂತಿಮವಾಗಿ ಶಗುನ್ ಆಯ್ಕೆ ನಡೆದಿದ್ದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ 12 ಆಟಗಾರರಲ್ಲಿ ಶಗುನ್ ವರ್ಮ ಹೆಗ್ಡೆ ಏಕೈಕ ಆಟಗಾರ್ತಿ ಆಗಿದ್ದಾರೆ.









