ಪಡಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ತಾಲೂಕಿನ ನೌಕರರ ಯೂನಿಯನ್ ಅಧ್ಯಕ್ಷರು ಆಗಿರುವ ಶ್ರೀಮತಿ ಸುಕೇಶಿನಿ. ಎ. ಇವರಿಗೆ ಮಡಂತ್ಯಾರು ಪ್ಯಾಕ್ಸ್ ಅಧ್ಯಕ್ಷರು ಆದ ಜೋಯೆಲ್ ಮೆಂಡೋನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಾಯಕ ದೀಕ್ಷಾಮಣಿ ಪ್ರಶಸ್ತಿ ಗೌರವ ಪ್ರದಾನ ಮಾಡಲಾಯಿತು.









