ಸಚಿವ ಸಂಪುಟ ಸಭೆ ಬಳಿಕ ಮಂಗಳೂರಿನ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಡಿಕೆ ಶಿವಕುಮಾರ್, ತುಳುನಾಡಿನ ತಂದೆ, ತಾಯಿ ಹಾಗೂ ಯುವ ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ, ‘ಈ ಜಿಲ್ಲೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಇಲ್ಲಿನ ಇತಿಹಾಸ ಮತ್ತು ಪರಂಪರೆಯನ್ನು ರಾಷ್ಟ್ರವೇ ಗೌರವಿಸುತ್ತದೆ. ಈ ಜಿಲ್ಲೆಗೆ ಅಳಿಲು ಸೇವೆ ಸಲ್ಲಿಸುವ ಉದ್ದೇಶದಿಂದ, ನಾನು ಅಧಿಕಾರ ವಹಿಸಿಕೊಂಡ ನಂತರ ಬೆಂಗಳೂರಿನ ಹೊರಗೆ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ಜನರ ಮುಂದೆ ಕೂತಿದ್ದೇನೆ. ಭಾವನಾತ್ಮಕ ವಿಚಾರಗಳಿಗಿಂತ ಜನರ ಭಾವನೆ ಮೇಲೆ ರಾಜಕೀಯ ಮಾಡಲ್ಲ’ ಎಂದು ಹೇಳಿದರು.


ಗ್ರಾಮೀಣ ಹಾಗೂ ಕರಾವಳಿ ಭಾಗಕ್ಕೆ ಸಮಪಾಲು
‘ಸಂಪುಟ ಸಭೆಯಲ್ಲಿ 32,611 ಕೋಟಿ ರೂ ಅಭಿವೃದ್ಧಿ ಯೋಜನೆಗಳಿಗೆ ಅಧಿಕೃತ ಅನುಮೋದನೆ ನೀಡಲಾಗಿದೆ. ಈ ಪೈಕಿ 16,000 ಕೋಟಿ ರೂ ಗ್ರಾಮೀಣಾಭಿವೃದ್ಧಿಗೆ ಹಾಗೂ ಉಳಿದ 16,000 ಕೋಟಿ ರೂ ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇದರಲ್ಲಿ ರಸ್ತೆ ಅಭಿವೃದ್ಧಿಗಾಗಿಯೇ 14,000 ಕೋಟಿ ರೂ ಅನುದಾನ ಒದಗಿಸಲಾಗುವುದು’ ಎಂದು ಅವರು ತಿಳಿಸಿದರು.
- ಮಠ-ಮಾನ್ಯಗಳಿಗೆ ಬಂಪರ್ ಗಿಫ್ಟ್
- ದೇವಾಲಯಗಳ ಅಭಿವೃದ್ಧಿಗೆ 12 ಕೋಟಿ ರೂ ಅನುದಾನ
- ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು 5 ಕೋಟಿ ರೂ.
- ಒಡಿಯೂರು ಮಠ, ವಿಟ್ಲ (ಬಂಟ್ವಾಳ/ಪುತ್ತೂರು ಕ್ಷೇತ್ರ): 1 ಕೋಟಿ ರೂ.
- ಶ್ರೀ ಧಾಮ ಮಾಣಿಲ ಮಠ (ಬಂಟ್ವಾಳ/ಪುತ್ತೂರು ಕ್ಷೇತ್ರ): 1 ಕೋಟಿ ರೂ.
- ಮಾಣಿಲಾ ಗ್ರಾಮ ಕುಕ್ಕಾಜೆ ಕಾಳಿಕಾಂಬ ಆಂಜನೇಯ ಸ್ವಾಮಿ ಕ್ಷೇತ್ರ: 1 ಕೋಟಿ ರೂ.
- ಕಾಣಿಯೂರು ಚಾಮುಂಡೇಶ್ವರಿ ಕ್ಷೇತ್ರ, ಕನ್ಯಾ ಗ್ರಾಮ: 1 ಕೋಟಿ ರೂ.
- ಪಿಳ್ಳಿ ಚಾಮುಂಡಿ ದೈವಸ್ಥಾನ ಕೊಂಡನ, ಕೋಟೆಕಾರ್ (ಉಳ್ಳಾಲ): 1 ಕೋಟಿ ರೂ.
- ಶ್ರೀ ರಾಮ ಕ್ಷೇತ್ರ, ಕನ್ಯಾಡಿ (ದಕ್ಷಿಣ ಕನ್ನಡ): 1 ಕೋಟಿ ರೂ.
- ಕೇಮಾರು ಮಠ, ಶ್ರೀ ಸಾಂದೀಪನಿ ಸಾಧನಾಶ್ರಮ: 1 ಕೋಟಿ ರೂ.
- ಕಂಬಳಕ್ಕೆ ನೀಡುತ್ತಿದ್ದ 40 ಲಕ್ಷ ರೂ ಅನುದಾನವನ್ನು 1 ಕೋಟಿ ರೂ ಏರಿಕೆ ಮಾಡಲಾಗಿದೆ



