ಮುಖ್ಯಪೇಟೆಯಲ್ಲೇ ಸಂಚಾರಕ್ಕೆ ತೊಡಕು, ದುರಸ್ತಿಗೆ ಮರೆತ ಹೆದ್ದಾರಿ ಇಲಾಖೆ?
ವೇಣೂರು: ಮಳೆಗಾಲದ ಬಳಿಕ ರಸ್ತೆ, ಹೆದ್ದಾರಿಗಳಲ್ಲಿ ನಿರ್ಮಾಣವಾಗಿದ್ದ ಹೊಂಡಾಗುಂಡಿಗಳನ್ನು ಮುಚ್ಚಲಾಗಿದೆ. ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ದುರಸ್ತಿ ಕಾರ್ಯ ನಡೆದಿದೆ. ಆದರೆ ಹೆದ್ದಾರಿ ಇಲಾಖೆ ವೇಣೂರು ಹೆದ್ದಾರಿಯನ್ನು ಮರೆತಂತಿದೆ.
ಹೌದು, ವೇಣೂರಿನಿಂದ ಪಡ್ಡಂದಡ್ಕದವರೆಗೆ ಹೆದ್ದಾರಿಗಳನ್ನು ಹಲವಾರು ಹೊಂಡಗಳಿದ್ದು, ಸಂಚಾರಕ್ಕೆ ತೊಡಕಾಗಿದೆ. ವೇಣೂರು ಸೇತುವೆ ಮೇಲೆ ಹಾಗೂ ಮಹಾವೀರ ನಗರದ ಅರಹಂತ ಕಾಂಪ್ಲೆಕ್ಸ್ ಮುಂಭಾಗದ ತಿರುವಿನಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಗುಂಡಿಯನ್ನು ತಪ್ಪಿಸುವ ಭರದಲ್ಲಿ ವಾಹನಗಳು ವಿರುದ್ಧ ದಿಕ್ಕಿಗೆ ಬರುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ತ್ವರಿತಗತಿಯಲ್ಲಿ ಹೆದ್ದಾರಿ ಇಲಾಖೆ ಗಮನ ಹರಿಸಿ ತುರ್ತು ಕಾರ್ಯ ನಡೆಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.






