ವೇಣೂರು: ಭಾರತೀಯ ಜೈನ್ ಮಿಲನ್ ವೇಣೂರು ಇದರ ಜುಲೈ ತಿಂಗಳ ಮಾಸಿಕ ಸಭೆ ಮತ್ತು ಆಹಾರ ಉತ್ಸವ ಕಾರ್ಯಕ್ರಮವು ಜು. ೨೬ರಂದು ವೇಣೂರಿನ ಭರತೇಶ ಸಮುದಾಯ ಭವನದಲ್ಲಿ ನಡೆಯಿತು.

ಆಹಾರೋತ್ಸವದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಡಾ. ಪ್ರತೀತ್ ಬಿ. ಅಜಿಲ ಅವರು ನೆರವೇರಿಸಿ, ಇಂದಿನ ಆಹಾರ ಪದ್ಧತಿಯ ಬಗ್ಗೆ, ಪೌಷ್ಟಿಕಾಂಶಗಳು ಹಾಗೂ ಇನ್ನಿತರ ಆರೋಗ್ಯಕರ ಆಹಾರದ ಕುರಿತು ಮಾಹಿತಿಯನ್ನು ನೀಡಿದರು. ವೀರ್ ವೃಷಭರಾಜ್ ಅಜ್ರಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಸಭೆಯಲ್ಲಿ ವಲಯ ನಿರ್ದೇಶಕ ವೀರ್ ಬಿ. ಪ್ರಮೋದ್ ಕುಮಾರ್, ವೀರ್ ಸುದರ್ಶನ್ ಜೈನ್ ಉಪಾಧ್ಯಕ್ಷರು , ಭಾರತೀಯ ಜೈನ್ ಮಿಲನ್ ವಲಯ 8, ವೀರ್ ಅನಂತ್ರಾಜ ಆರಿಗ ಬೆಳ್ಳಿಬೆಟ್ಟು ಖ್ಯಾತ ಪಾಕ ತಜ್ಞರು ಹಾಗೂ ವೀರಾಂಗನಾ ಸುನಿತಾ ನವೀನ್ ಚಂದ್ ಬಲ್ಲಾಳ್ ಮಾಜಿ ಅಧ್ಯಕ್ಷರು ಬ್ರಾಹ್ಮಿ ಮಹಿಳಾ ಸಂಘ ವೇಣೂರು ಭಾಗವಹಿಸಿದ್ದರು.
ಸನ್ಮಾನ
ಎಸ್ ಎಸ್ ಎಲ್ ಸಿಯಲ್ಲಿ ಅತ್ಯುನ್ನತ ಅಂಕ ಪಡೆದ ವೀರ ಕುವರಿ ಸಮೃದ್ಧಿ ಜೈನ್ ಕೊಡಂಗೆ ಹಾಗೂ ಖ್ಯಾತ ಪಾಕ ತಜ್ಞರಾದ ವೀರ್ ಅನಂತ್ ರಾಜ ಆರಿಗ ಬೆಳ್ಳಿಬೆಟ್ಟು ಇವರನ್ನು ಎಲ್ಲಾ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ವೀರ ಕುವರಿ ಪ್ರತಿಷ್ಠಾ ಪ್ರಾರ್ಥಿಸಿದರು. ಸುಧೀರ್ ಕುಮಾರ್ ಬಜಿರೆ ಸ್ವಾಗತಿಸಿದರು. ವೀರ್ ಭರತ್ ಜೈನ್ ಪಾಲೆದಡಿ ಕಾರ್ಯಕ್ರಮ ನಿರೂಪಿಸಿ, ವೀರ್ ಪ್ರಶಾಂತ್ ಕುಮಾರ್ ಜೈನ್ ವಂದಿಸಿದರು. ಕಾರ್ಯಕ್ರಮವು ಶಾಂತಿಮಂತ್ರದೊಂದಿಗೆ ಕೊನೆಗೊಂಡಿತು. ಈ ಆಹಾರ ಉತ್ಸವದಲ್ಲಿ ಸುಮಾರು ೫೫ ಬಗೆಯ ತಿಂಡಿ ತಿನಿಸುಗಳಿದ್ದವು.



