ಮೊರಾಸ್ ಕುಟುಂಬದ ಆತ್ಮೀಯತೆಯನ್ನು ಹಾಡಿಹೊಗಳಿದ ಅತಿಥಿ ಗಣ್ಯರು!
ವೇಣೂರು: ಬಹಳಷ್ಟು ನಿರಂತರ ಶ್ರಮವಹಿಸಿ ಒಂದು ಉತ್ತಮ ಹೆಸರುವಾಸಿಯಾಗಿ ಮೊರಾಸ್ ಕುಟುಂಬ ಸಮಾಜದಲ್ಲಿ ಗುರುತಿಸಿಕೊಂಡಿದೆ. ಊರಿನೊಂದಿಗಿನ ಅವರ ಬಾಂಧವ್ಯ ನಿರಂತರ ಮುಂದುವರಿಯಲಿ, ಅವರ ಉದ್ಯಮಗಳು ಯಶಸ್ವಿಯಾಗಲಿ ಎಂದು ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂ.ಫಾ. ಎಡ್ವಿನ್ ಸಂತೋಷ್ ಮೋನಿಸ್ ಆಶೀರ್ವದಿಸಿದರು.
ವೇಣೂರು ಕರಿಮಣೇಲು ಗ್ರಾಮದ ಗಾಂಧಿನಗರದಲ್ಲಿ ವಲೇರಿಯನ್ ಶಾಲಿನಿ ಮೊರಾಸ್ ಮಾಲಕತ್ವದ ಮೊರಾಸ್ ರೈಸ್ಮಿಲ್ನ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿದ್ದ ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿಇ ಅವರು ಮಾತನಾಡಿ, ಮೊರಾಸ್ ಕುಟುಂಬದ ಆತ್ಮೀಯತೆಯನ್ನು ಮೆಲುಕು ಹಾಕಿದರು. ಆತ್ಮನಿರ್ಭರ ಭಾರತದ ಅಡಿಯಲ್ಲಿ ಸ್ವಂತ ಉದ್ಯಮಕ್ಕೆ ಸಮಾಜದಲ್ಲಿ ಉತ್ತಮ ಬೆಲೆ ಸಿಕ್ಕಂತಾಗುತ್ತದೆ. ರೈಸ್ ಮಿಲ್ ಉದ್ಯಮವನ್ನು ಸವಾಲಿನ ರೀತಿಯಲ್ಲಿ ಮುಂದುವರಿಸಿ ಇದೀಗ ಸುಸಜ್ಜಿತ ಮಿಲ್ ನಿರ್ಮಿಸಿರುವ ಇವರ ಸಾಧನೆ ಯಶಸ್ವಿ ಕಾಣಲಿ ಎಂದರು. ವೇಣೂರು ಸಿಎ ಬ್ಯಾಂಕ್ ನಿವೃತ್ತ ಪ್ರಬಂಧಕ ಎಚ್. ಮಹಮ್ಮದ್ ವೇಣೂರು ಮಾತನಾಡಿ, ಹಿಂದಿನ ಕಷ್ಟದ ಕಾಲದಲ್ಲಿ ಮೊರಾಸ್ ಕುಟುಂಬ ನಡೆಸುತ್ತಿದ್ದ ಮಿಲ್ ಉದ್ಯಮದ ಕಾರ್ಯವನ್ನು ನೆನೆದು ಉತ್ತಮ ಸೇವೆ ನೀಡುತ್ತಾ ಅಭಿವೃದ್ಧಿ ಪಥದಲ್ಲಿ ಸಾಗಿದ ಬಗ್ಗೆ ವಿವರಿಸಿದರು.
ಪೊಲೀಸ್ ಹೆಡ್ ಕಾನ್ಸ್ ಸ್ಟೇಬಲ್ ಹರೀಶ್ ನಾಯ್ಕ್ ಅವರು ಮಾತನಾಡಿ, ಮೊರಾಸ್ ಕುಟಂಬದ ಉದ್ಯಮ ಮತ್ತು ಕೃಷಿ ಕ್ಷೇತ್ರದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೊರಾಸ್ ಕುಟುಂಬದ ಆದರ್ಶ ಬದುಕು ನಮಗೆಲ್ಲಾ ಮಾದರಿ ಎಂದ ಅವರು, ಅವರ ಮಕ್ಕಳ ಶೈಕ್ಷಣಿಕ ಸಾಧನೆಯನ್ನೂ ನೆನಪಿಸಿಕೊಂಡರು.
ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಆಗಮಿಸಿದ್ದರು. ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ್ ಶೆಟ್ಟಿ, ವೇಣೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಅರುಣ್ ಕ್ರಾಸ್ತ, ಪೆರಿಂಜೆ ಹಾಲು ಉ.ಸ. ಸಂಘದ ಅಧ್ಯಕ್ಷ ಯನ್. ಸೀತಾರಾಮ ರೈ, ಕ್ರಿಸ್ತರಾಜ ವಾಳೆ ಗುರಿಕಾರರಾದ ಜೆರೋಮಿಯಸ್ ಮೊರಾಸ್, ಚರ್ಚ್ ಪಾಲನ ಪರಿಷತ್ ಉಪಾಧ್ಯಕ್ಷ ಡೆನ್ನಿಸ್ ಸಿಕ್ವೆರಾ ಸೇರಿದಂತೆ ವೇಣೂರು ಪರಿಸರದ ಹಲವು ಉದ್ಯಮಿಗಳು, ಮೊರಾಸ್ ಕುಟುಂಬದ ಆತ್ಮೀಯರು ಹಾಗೂ ಬಂಧು ಬಳಗ ಉಪಸ್ಥಿತರಿದ್ದರು.
ಕಟ್ಟಡ ನಿರ್ಮಾಣ ಹಾಗೂ ಯಂತ್ರೋಪಕರಣಗಳ ಅಳವಡಿಕೆಗೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ವಲೇರಿಯನ್ ಶಾಲಿನಿ ಮೊರಾಸ್ ದಂಪತಿ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು. ಹೆನ್ರಿ ಮೊರಾಸ್ ಕಾರ್ಯಕ್ರಮ ನಿರ್ವಹಿಸಿ, ವಿನಿಶಾ ಮೊರಾಸ್ ವಂದಿಸಿದರು.









