ಏಕಾಗ್ರತೆಯಲ್ಲಿ ಯಶಸ್ವಿನ ರಹಸ್ಯ ಅಡಗಿದೆ: ಬಿ. ಸೋಮಶೇಖರ ಶೆಟ್ಟಿ
ವೇಣೂರು: ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ, ಸಾಧಿಸುವ ಛಲದ ಜೊತೆ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು. ಏಕಾಗ್ರತೆಯಲ್ಲಿ ಯಶಸ್ವಿನ ರಹಸ್ಯ ಅಡಗಿದೆ. ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದು ಬಿ. ಸೋಮಶೇಖರ ಶೆಟ್ಟಿ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಸ.ಹಿ. ಪ್ರಾಥಮಿಕ ಶಾಲೆ ಮಂಗಳತೇರು ಇಲ್ಲಿ ನಡೆದ ವಿದ್ಯಾರ್ಥಿ ನಾಯಕತ್ವ ಶಿಬಿರದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಂ.ಜೆ.ಎಂ. ಉಳ್ತೂರು ಇಲ್ಲಿನ ಧರ್ಮ ಗುರುಗಳಾದ ಮಹಮ್ಮದ್ ತೌಸಿಫ್ ಸಹದಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಾಂತರಾಜ್ ಕುಮಾರ್, ಕೃಷ್ಣಪ್ಪ ಪೂಜಾರಿ, ಸುಧಾಕರ ಪೂಜಾರಿ, ದಯಾನಂದ ದೇವಾಡಿಗ, ಶ್ರೀಮತಿ ರಮ್ಯಾ, ಶ್ರೀಮತಿ ಶಕುಂತಳಾ, ಶ್ರೀಮತಿ ಶಶಿಕಲಾ, ವಿಶ್ವನಾಥ ಪೂಜಾರಿ, ಉಮೇಶ್ ದೇವಾಡಿಗ, ಶ್ರೀಮತಿ ವೀಣಾ ಟಿ., ಶ್ರೀಮತಿ ಪುಷ್ಪಲತಾ ಉಪಸ್ಥಿತರಿದ್ದರು. ಕಾರ್ಯಕ್ರಮ ಅಧಿಕಾರಿಗಳಾದ ಪದ್ಮಪ್ರಸಾದ್ ಬಿ. ಹಾಗೂ ಸತೀಶ್ ಸಂಘಟಿಸಿದ್ದರು.






