ವೇಣೂರು: ಇಲ್ಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತುವಿನ ಉದ್ಘಾಟನಾ ಸಮಾರಂಭ ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಉಪ ಪ್ರಾಂಶುಪಾಲ ವೆಂಕಟೇಶ್ ಎಸ್ . ತುಳುಪುಳೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿಸರ್ಕಾರಿ ಪದವಿ ಪೂರ್ವ ಕಾಲೇಜು ಇದರ ಪ್ರಾಂಶುಪಾಲರಾದ ಹಾಗೂ ವೇಣೂರು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಯಾದ ಸುಕುಮಾರ್ ಜೈನ್ ವಹಿಸಿದ್ದರು.
ಗುರುಪ್ರಸಾದ್ ಉದ್ಯಮಿಗಳು ಮತ್ತು ಗುತ್ತಿಗೆದಾರರು ನಾರಾವಿ, ರಾಜೇಶ್ ಪೂಜಾರಿ ಕಾರ್ಯಾಧ್ಯಕ್ಷರು ಎಸ್ ಡಿ ಎಂ ಸಿ, ಎನ್ ಸಿ ಸಿ ಕಾರ್ಯಕ್ರಮ ಅಧಿಕಾರಿ ರವೀಂದ್ರ ಕೆ. ,ಶಾಲಾ ನಾಯಕ ಎನ್. ನರಸಿಂಹ ಕಾಮತ್ ಮತ್ತು ಉಪನಾಯಕಿ ಬ್ರಾಹ್ಮ ವೇದಿಕೆಯಲ್ಲಿದ್ದರು.
ಶಿಕ್ಷಕ ರವೀಂದ್ರ ಕೆ. ಸ್ವಾಗತಿಸಿ, ಪ್ರೇಮ ಕೆ. ವಂದಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಸುಶೀಲಾ ಜಿ ನಿರ್ವಹಿಸಿದರು.



