ಕಾರ್ಕಳ: ಮುಂಡ್ಕೂರು ಗ್ರಾಮದ ಸಂಕಲಕರಿಯ ಉಗ್ಗೆದಬೆಟ್ಟು ಪರಿಸರದಲ್ಲಿ ಚಿರತೆ ಹಾವಳಿಯಿಂದ ಗ್ರಾಮಸ್ಥರಿಗೆ ಆತಂಕ ಹೆಚ್ಚಾಗಿದೆ. ಹಲವಾರು ಮನೆಯ ನಾಯಿಗಳು, ಕೋಳಿಗಳು ಚಿರತೆಗೆ ಬಲಿಯಾಗಿವೆ. ರಾತ್ರಿ ಹೊತ್ತು ಚಿರತೆ ಮನೆ ಅಂಗಳದಲ್ಲಿ ಸುತ್ತಾಡುವ ದೃಶ್ಯ ನವನೀತ ಅಮೀನ್ ರವರ ಮನೆಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಚಿರತೆಯ ಹಾವಳಿಯಿಂದ ಜನರು ಭಯಭೀತರಾಗಿದ್ದಾರೆ.


ಅರಣ್ಯ ಇಲಾಖೆ ಬೋನ್ ಇಟ್ಟು ಚಿರತೆಯನ್ನು ಹಿಡಿಯಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.



