ಭದ್ರತೆಗೆ 2.5 ಲಕ್ಷ ಪೊಲೀಸ್, 15000 ಅರೆಸೇನಾ ಸಿಬ್ಬಂದಿ ನಿಯೋಜನೆ
ನವದೆಹಲಿ, ಜೂ. 20: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನೀಟ್-ಯುಜಿ ಮರುಪರೀಕ್ಷೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಇಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರಾಷ್ಟ್ರವ್ಯಾಪಿ ಮಾಕ್ ಡ್ರಿಲ್ ನಡೆಸಲಿದೆ.
ನೀಟ್ ಪರೀಕ್ಷೆಗೆ ಸಂಬಂಧ ಇಂದು ದೇಶದ 551 ನಗರಗಳಲ್ಲಿ ಅಣುಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಪೂರ್ಣ ಪ್ರಮಾಣದ ಅಭ್ಯಾಸ ನಡೆಯಲಿದೆ. ಪ್ರಶ್ನೆಪತ್ರಿಕೆ ವಿತರಣೆ, ಉತ್ತರ ಪತ್ರಿಕೆ ಸಂಗ್ರಹ ಮತ್ತು ಸಾಗಣೆ ಸೇರಿದಂತೆ ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನು ಅಣುಕು ಕಾರ್ಯಾಚರಣೆ ನಡೆಸಲಾಗುವುದು. ನಾಳೆ ದೇಶಾದ್ಯಂತ 5,500 ಕ್ಕೂ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿದೆ.
ಆಯಾ ಜಿಲ್ಲಾಡಳಿತ, ರಾಜ್ಯ ಪೊಲೀಸ್ ಪಡೆಗಳು ಮತ್ತು ಕೇಂದ್ರ ಸರ್ಕಾರದ ವಿಶೇಷ ಭದ್ರತಾ ತಂಡಗಳನ್ನ ಒಳಗೊಂಡಂತೆ ಮೂರು ಹಂತದ ಭದ್ರತೆ ನಿಯೋಜಿಸಲಾಗಿದೆ. ಸುಮಾರು 2.5 ಲಕ್ಷ ಪೊಲೀಸ್ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸಲಾಗುತ್ತಿದೆ. ಜೊತೆಗೆ ಸುಮಾರು 15,000 ಅರೆಸೇನಾ ಸಿಬ್ಬಂದಿ ಪ್ರಶ್ನೆಪತ್ರಿಕೆಗಳ ಸಾಗಣೆ ಮತ್ತು ಪರೀಕ್ಷೆ ನಂತರ ಉತ್ತರ ಪತ್ರಿಕೆಗಳನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಕಾರ್ಯ ಮಾಡಲಿದ್ದಾರೆ. ಕಣ್ಗಾವಲಿಗಾಗಿ 1.5 ಲಕ್ಷ ಸಿಸಿಟಿವಿ ಕ್ಯಾಮೆರಾಗಳು, 15,000 ಸಿಗ್ನಲ್ ಜಾಮರ್ಗಳನ್ನ ಅಳವಡಿಸಲಾಗಿದೆ. ಎನ್ಟಿಎ ಕೇಂದ್ರ ಕಚೇರಿ ಮತ್ತು ದೇಶಾದ್ಯಂತ ಸ್ಥಾಪಿಸಲಾದ ಕಂಟ್ರೋಲ್ ರೂಮ್ಗಳಿಂದ ನೈಜ ಸಮಯ ಮೇಲ್ವಿಚಾರಣೆ ಮಾಡಲಾಗುತ್ತದೆ.



