ಧರ್ಮಸ್ಥಳ ದ್ವಾರದ ಬಳಿ ಸಂಸದ ಚೌಟರಿಂದ ಗುದ್ದಲಿ ಪೂಜೆ, ಡಾ. ಹೆಗ್ಗಡೆ, ಹರೀಶ್ ಪೂಂಜ ಭಾಗಿ
ಧರ್ಮಸ್ಥಳ : ಬಹುಬೇಡಿಕೆಯ ಉಜಿರೆ- ಪೆರಿಯಶಾಂತಿ ಸ್ಟರ್ ರಸ್ತೆಯ 614 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಇಂದು (ನ.22) ಧರ್ಮಸ್ಥಳ ದ್ವಾರದ ಬಳಿ ಗುದ್ದಲಿ ಪೂಜೆ ನೆರವೇರಿತು.
ದ.ಕ. ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಭೂಮಿಪೂಜೆ ನೆರವೇರಿಸಿದರು. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲ, ಕುಶಾಲಪ್ಪ ಗೌಡ, ಮುಗೋಡಿ ಸುಧಾಕರ ಶೆಟ್ಟಿ ಹಾಗೂ ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.









