ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಡಿಜಿಟಲ್ ಪಾವತಿಗಳ ಮೇಲಿನ ಶುಲ್ಕಗಳ ಕುರಿತು ಹರಡುತ್ತಿರುವ ವದಂತಿಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆಗೆ (PSS Act) ತರಲಾದ ತಿದ್ದುಪಡಿಯು ಯುಪಿಐ ವ್ಯವಸ್ಥೆಯನ್ನು ಮತ್ತಷ್ಟು ಸುರಕ್ಷಿತ, ಸುಸ್ಥಿರ ಮತ್ತು ಆಧುನಿಕಗೊಳಿಸುವ ಉದ್ದೇಶ ಹೊಂದಿದೆಯೇ ಹೊರತು ಸಾಮಾನ್ಯ ಬಳಕೆದಾರರ ಮೇಲೆ ಶುಲ್ಕ ಹೇರಲು ಅಲ್ಲ ಎಂದು ಸ್ಪಷ್ಟಪಡಿಸಿದೆ. ಯುಪಿಐ ಮೂಲಕ ಪಾವತಿ ಮಾಡುವ ಯಾವುದೇ ಗ್ರಾಹಕರಿಗೆ ಅಥವಾ ನಾಗರಿಕರಿಗೆ ಎಷ್ಟೇ ವಹಿವಾಟು ನಡೆಸಿದರೂ ಯಾವುದೇ ಶುಲ್ಕ ಇರುವುದಿಲ್ಲ.