ವೇಣೂರು: ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆ ಬೆಳ್ತಂಗಡಿಯಲ್ಲಿ ನಡೆದಿದ್ದು, ವೇಣೂರು ನಿಟ್ಟಡೆ ಕುಂಭಶ್ರೀ ಪ್ರೌಢಶಾಲಾ ವಿಭಾಗದ ಎಂಟನೇ ತರಗತಿಯ ಕುಮಾರಿ ಪ್ರಿಯಾ ಕೆ.ಎಸ್. ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಎಂಟನೇ ತರಗತಿಯ ಚಿನ್ಮಯಿ ಆಶುಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ.ಹೆಚ್. ಹಾಗೂ ಸಂಚಾಲಕರಾದ ಅಶ್ವಿತ್ ಕುಲಾಲ್ ಹಾಗೂ ಶಿಕ್ಷಕ ವೃಂದದವರು ಶುಭ ಹಾರೈಸಿದರು.









