ವೇಣೂರು: ಕೃಷಿ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆ ಮತ್ತು ಅವಿಷ್ಕಾರಗಳಿಗಾಗಿ ಬಜಿರೆ ಗ್ರಾಮದ ಹಲ್ಲಂದೋಡಿ ಬಿ. ಶಶಿಕುಮಾರ್ ಇಂದ್ರ ಅವರಿಗೆಕೃಷಿ ಸಿಂದೂರ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ಮಡಂತ್ಯಾರಿನಲ್ಲಿ ಜರಗಿದ ೭೫ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ೨೦೨೫ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇವರು ದ.ಕ. ಜಿಲ್ಲಾ ಸಂಸ್ಕಾರ ಭಾರತಿಯಲ್ಲಿ ಅನ್ಯನ್ಯ ಜವಾಬ್ದಾರಿಗಳನ್ನು ವಹಿಸಿಕೊಂಡು ಹಲವಾರು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಸಂಯೋಜನೆ ಮಾಡಿ ಉತ್ತಮ ಸಂಘಟಕರು ಎಣಿಸಿಕೊಂಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ಹಲವಾರು ಅವಿಷ್ಕಾರಗಳ ಮೂಲಕ ಕೃಷಿಕರಿಗೆ ಉತ್ತೇಜನ ನೀಡುತ್ತಿದ್ದಾರೆ.









