ಬಂಟ್ವಾಳ: ಇಲ್ಲಿಯ ನರಿಕೊಂಬುವಿನ ತಾರಿಪಡ್ಪು ಶ್ರೀ ಪಟ್ಟದ ಮಂತ್ರದೇವತೆ ಹಾಗೂ ಸ್ವಾಮಿ ಕೊರಗಜ್ಜ ದೈವಗಳಿಗೆ ಸಾಂಪ್ರದಾಯಿಕ ದೊಂದಿ ಬೆಳಕಿನಲ್ಲಿ ವಾರ್ಷಿಕ ಕೋಲೋತ್ಸವವು ಮಾ. 29ರಂದು ರಾತ್ರಿ 8-30ರಿಂದ ನಡೆಯಲಿದೆ.
ಅಂದು ಬೆಳಿಗ್ಗೆ ಗಣಹೋಮ, ದೈವಗಳಿಗೆ ನವಕ ಕಲಶ ಹಾಗೂ ರಾತ್ರಿ 8-00 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 8-30ರಿಂದ ಶ್ರೀ ಪಟ್ಟದ ಮಂತ್ರದೇವತೆ ಹಾಗೂ ಸ್ವಾಮಿ ಕೊರಗಜ್ಜ ದೈವಗಳಿಗೆ ಸಾಂಪ್ರದಾಯಿಕ ದೊಂದಿ ಬೆಳಕಿನಲ್ಲಿ ವಾರ್ಷಿಕ ಕೋಲೋತ್ಸವ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವಗಳ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ದೈವ ಪಾತ್ರಿ ಪ್ರದೀಪ್ ಅವರು ತಿಳಿಸಿದ್ದಾರೆ.





