ವೇಣೂರು: ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರ ಕ್ಷೇತ್ರ ಬರ್ಕಜೆ ಇಲ್ಲಿ ಎ. 26ರಂದು ಗುಳಿಗ ದೈವ ಹಾಗೂ ಕೊರಗಜ್ಜ ದೈವದ ಗಗ್ಗರ ಸೇವೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ರಮೇಶ್ ಬರ್ಕಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಮಧ್ಯಾಹ್ನ 12-00 ಗಂಟೆಯಿಂದ ಗುಳಿಗ ದೈವದ ಗಗ್ಗರ ಸೇವೆ ನಡೆಯಲಿದ್ದು, ಸಂಜೆ 4-00 ಗಂಟೆಯಿಂದ ಕೊರಗಜ್ಜ ದೈವದ ಗಗ್ಗರಸೇವೆ ಹಾಗೂ ಅಗೇಲು ಸೇವೆ ನಡೆಯಲಿದೆ. ಏಕಕಾಲದಲ್ಲಿ ಒಂಭತ್ತು ಗುಳಿಗ ದೈವಗಳ ಗಗ್ಗರಸೇವೆಯಿಂದ ರಾಜ್ಯಾದ್ಯಂತ ಈ ಕ್ಷೇತ್ರ ಹೆಸರುವಾಸಿಯಾಗಿದೆ.
ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ
2027ರ ಫೆಬ್ರವರಿಯಲ್ಲಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯಲಿದ್ದು, ಇದರ ಮೊದಲ ಪೂರ್ವಭಾವಿ ಸಭೆಯು ಎ. 26ರಂದು ಅಪರಾಹ್ನ 3-00 ಗಂಟೆಯಿಂದ ಕ್ಷೇತ್ರದ ವಠಾರದಲ್ಲಿ ನಡೆಯಲಿದೆ. ಈ ಪೂರ್ವಭಾವಿ ಸಭೆಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆಸೂಚನೆಗಳನ್ನು ನೀಡುವಂತೆ ಧರ್ಮದರ್ಶಿಯವರು ತಿಳಿಸಿದ್ದಾರೆ.





