ಕೊಲ್ಕತ್ತಾ: ಕರ್ನಾಟಕದ ಬೆಂಗಳೂರು (ಆರ್ಸಿಬಿ ಕಾಲ್ತುಳಿತ), ಪೂರಿ ಜಗನ್ನಾಥ ರಥಾಯಾತ್ರೆಯ ಘಟನೆ ಬಳಿಕ ಇದೀಗ ಕೊಲ್ಕತ್ತಾದ ದುರ್ಗಾ ಪೂಜೆಯಲ್ಲಿ ಕಾಲ್ತುಳಿತ ಸಂಭವಿಸಿದೆ. ಸಹಸ್ರಾರು ಸಂಖ್ಯೆಯಲ್ಲಿ ಪೂಜೆಯಲ್ಲಿ ಭಾಗವಹಿಸಿದ್ದರು, ಈ ವೇಳೆ ದುರ್ಗಾ ಪೆಂಡಾಲ್ ಒಂದರಲ್ಲಿ ನೂಕು ನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತ ಪಟ್ಟವರಿಗೆ ಹಾಗೂ ಗಾಯಾಳುಗಳಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ ಆಗಿದೆ. ಮೃತರಿಗೆ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರ ಘೋಷಿಸಲಾಗಿದೆ.


ಶನಿವಾರ ಸಂಜೆ 7 ಗಂಟೆ ನಂತರ ದುರ್ಗಾ ಪೂಜೆಯಲ್ಲಿ ಅಪಾರ ಭಕ್ತರು ಸೇರಿದ್ದರು. ಈ ವೇಳೆ ನಿರ್ಗಮನ ದ್ವಾರದಲ್ಲಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತು. ಒಂದು ಮಗು, ಮಹಿಳೆಯರು ಸೇರಿ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ಸುಮಾರು 40 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗಿರೀಶ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ದೇಶವೇ ತಿರುಗಿ ನೋಡುವಂತೆ ಮಾಡಿದೆ.

ಪರಿಹಾರ ಘೋಷಿಸಿದ ಪ್ರಧಾನಿ ಮೋದಿ ಕೊಲ್ಕತ್ತಾ ದುರ್ಗಾ ಪೂಜೆಯಲ್ಲಿ ಪಾಆಲ್ಗೊಂಡ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬದವರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು. ಪ್ರತಿ ಗಾಯಾಳುಗಳಿಗೆ ₹50,000 ಪರಿಹಾರ ಒದಗಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಎಕ್ಸ್ ಪೋಸ್ಟ್ ಮೂಲಕ ತಿಳಿಸಿದೆ.
‘ನಮೋ’ ಕಾರ್ಯಕ್ರಮ ರದ್ದು ಭಾನುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ನಿಗದಿಯಾಗಿದ್ದ ನನ್ನ ಎಲ್ಲಾ ಕಾರ್ಯಕ್ರಮಗಳನ್ನು ನಾನು ಮುಂದೂಡುತ್ತೇನೆ. ಗಾಯಾಳುಗಳನ್ನು ಭೇಟಿಯಾಗಿದ್ದೇನೆ. ರೋಗಿಗಳೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ತಾಯಿ ದುರ್ಗೆಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಎಕ್ಸ್ ಪೋಸ್ಟ್ ಮೂಲಕ ಶನಿವಾರ ರಾತ್ರಿ ಪ್ರಧಾನಮಂತ್ರಿಗಳು ಕೋರಿದ್ದರು.
