ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಯೋಜನಾ ಕಚೇರಿಯ ನಾರಾವಿ ವಲಯ, ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ವತಿಯಿಂದ ಕೌಶಲ್ಯಾಭಿವೃಧ್ಧಿ ತರಬೇತಿಯಡಿ ಯೋಜನೆಯ ಪಾಲುದಾರ ಬಂಧುಗಳಿಗೆ ಐದು ದಿನಗಳ ಉಚಿತ ಸಾರಿ ಗೊಂಡೆ ತರಬೇತಿಯ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಪ್ರಥಮ ಬಾರಿಗೆ ನಾರಾವಿ ವಲಯದ ಕುತ್ಲೂರು ಮಂಜುಶ್ರೀ ಸಭಾಭವನದಲ್ಲಿ ನಡೆಯಿತು.

ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸದಾನಂದ ಬಂಗೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕರು ಮತ್ತು ಹಿರಿಯ ಸರ್ಕಾರಿ ಅಧಿಕಾರಿ ಶಶಿಕಾಂತ ಆರಿಗ ಪಾಂಡ್ಯಪ್ಪರೆ ಗುತ್ತು ಕುತ್ಲೂರು ಇವರು ಉದ್ಘಾಟಿಸಿ ಕ್ಷೇತ್ರದ ವತಿಯಿಂದ ಪೂಜ್ಯರು ಹಮ್ಮಿಕೊಂಡಿದ್ದ ಗ್ರಾಮೀಣ ಪ್ರದೇಶದ ಯುವಕ, ಯುವತಿಯರಿಗೆ ಹತ್ತು ಹಲವು ಸ್ವದ್ಯೋಗದ ತರಬೇತಿಗಳ ಮಾಹಿತಿ ಮಾರ್ಗದರ್ಶನ ಸಹಕಾರ ನೀಡಿದ ಪರಿಣಾಮದಿಂದ ಇಂದು ಸಮಾಜದಲ್ಲಿ ಸ್ವಾವಲಂಬಿ ಬದುಕು ಗಟ್ಟಿಯಾಗಿ ಸದೃಢವಾಗಿರುತ್ತಾರೆ ಎಂದು ಶುಭ ಹಾರೈಸಿದರು.

ಬೆಳ್ತಂಗಡಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ತರಬೇತಿ ಪ್ರಾಂಶುಪಾಲರಾದ ರಮೇಶ್ ರವರು ಪೂಜ್ಯರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು ಹುಟ್ಟು ಹಾಕಿದ ಈ ಗ್ರಾಮೀಣ ಶ್ರೇಷ್ಠತಾ ತರಬೇತಿ ಸಂಸ್ಥೆ ಬೆಳೆದು ಬಂದ ದಾರಿ ಮತ್ತು ಸಾರಿ ಗೊಂಡೆ ತರಬೇತಿ ಯಶಸ್ವಿಯಾಗಿ ಆಯೋಜನೆ ಮಾಡಿ ತರಬೇತಿ ಪಡೆದ ಫಲಾನುಭವಿ ಬಂಧುಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಐದು ದಿನಗಳ ಸಾರಿ ಗೊಂಡೆ ತರಬೇತಿ ನೀಡಿದ ಶ್ರೀಮತಿ ಜಯಪ್ರಭ ಕೊಕ್ರಾಡಿ, ಅಣ್ಣಿ ಯಮ್. ಕೆ . ಅಧ್ಯಕ್ಷರು ಮಂಜು ಶ್ರೀ ಭಜನಾ ಮಂಡಳಿ ಕುತ್ಲೂರು, ಒಕ್ಕೂಟದ ಅಧ್ಯಕ್ಷರುಗಳಾದ ಸಂತೋಷ್ ಕಾಂತಬೆಟ್ಟು, ಏಕನಾಥ ಪೂಜಾರಿ ಪ್ರಗತಿ ಬಂಧು ಒಕ್ಕೂಟ ಎ.ಬಿ. ಕುತ್ಲೂರು, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರಾದ ರತ್ನಾಕರ ಸಾಲ್ಯಾನ್, ಮಂಜುಶ್ರೀ ಭಜನಾ ಮಂಡಳಿಯ ಮಾಜಿ ಅಧ್ಯಕ್ಷರಾದ ದಿ. ರಾಮಚಂದ್ರ ಭಟ್ ಇವರ ಧರ್ಮಪತ್ನಿ ಪ್ರಮೀಳಾ ಆರ್. ಭಟ್ ಮತ್ತು ಒಕ್ಕೂಟದ ಪದಾಧಿಕಾರಿಗಳಾದ ಅರುಣ, ಸುರೇಶ್ ಮೂಲ್ಯ ಹಾಗೂ ಸಾರಿ ಗೊಂಡೆ ತರಬೇತಿ ಪಡೆದ ಯೋಜನೆಯ ಫಲಾನುಭವಿ ಬಂಧುಗಳು ಉಪಸ್ಥಿತರಿದ್ದರು.





