ವೇಣೂರು: ಮೂಡುಕೋಡಿಯ ಉಂಬೆಟ್ಟು ಶ್ರೀ ಉಮಾಮಹೇಶ್ವರ ದೇವಸ್ಥಾನವು ನವೀಕರಣಗೊಂಡು ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಈ ಬಗ್ಗೆ ಜೀರ್ಣೋದ್ಧಾರ ಕಚೇರಿ ಫೆ. 20ರಂದು ಉದ್ಘಾಟನೆಗೊಂಡಿತು.
ಗಣೇಶ್ ನಾರಾಯಣ ಪಂಡಿತ್ ಮೂಡುಕೋಡಿ ಅವರು ಕಚೇರಿ ಉದ್ಘಾಟಿಸಿದ್ದು, ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿಇ ಮೂಡುಕೋಡಿ ಅವರು ದೀಪ ಪ್ರಜ್ವಲನೆ ಮಾಡಿದರು.
ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎ. ಜಯರಾಮ ಶೆಟ್ಟಿ, ಉಮಾಮಹೇಶ್ವರ ಧಾರ್ಮಿಕ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷರು, ನ್ಯಾಯವಾದಿ ನಾಗೇಶ್ ಶೆಟ್ಟಿ ಡಿ., ಕಾರ್ಯದರ್ಶಿ ಸುಂದರ ಹೆಗ್ಡೆ ಬಿಇ, ಕೋಶಾಧಿಕಾರಿ ಶಶಿಧರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ. ಆನಂದ ಶೆಟ್ಟಿ, ಕಾರ್ಯಾಧ್ಯಕ್ಷ ರಾಜೇಶ್ ಪೂಜಾರಿ, ಕಾರ್ಯದರ್ಶಿ ವಸಂತ ಹೆಗ್ಡೆ, ಕೋಶಾಧಿಕಾರಿ ಪ್ರಶಾಂತ್ ಗೌಡ, ಅರವಿಂದ ಶೆಟ್ಟಿ, ಅನೂಪ್ ಜೆ. ಪಾಯಸ್, ಸುದರ್ಶನ್ ಕೊಳಂಗಜೆ, ಸುಪ್ರಿತಾ, ನಂದಿತಾ ನಡ್ತಿಕಲ್ಲು, ಕರುಣಾಕರ ಶೆಟ್ಟಿ, ಸಂದೇಶ್, ಲಕ್ಷ್ಮಣ್ ಪೂಜಾರಿ, ಸತೀಶ್ ಮೇಸ್ತ್ರಿ, ನಿದೇಶ್, ಸುಂದರ ಭಂಡಾರಿ, ಸುಕೇಶ್ ಹುರಾಬೆ, ಉದಯ ನವೋದಯ , ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.





