ಕಾರ್ಕಳ: ತಾಲೂಕಿನ ಮುಂಡ್ಕೂರು ಸನಿಹದ ಕುಲಾಲ ಸಂಘ (ರಿ.) ನಾನಿಲ್ತಾರ್ ಹಾಗೂ ಯುವ ವೇದಿಕೆ ಆಶ್ರಯದಲ್ಲಿ ಡಿ. ೨೧ರಂದು ನಡೆದ ಕುಲಾಲ ಕ್ರೀಡಾಕೂಟ-೨೦೨೫ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಅದ್ವಿತೀಯ ಸಾಧನೆಗಾಗಿ ವೇಣೂರು ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ.ಚ್. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಳ್ಮಣ್ ಕುಂಭನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕುಶ ಆರ್. ಮೂಲ್ಯ, ಮಹಿಳಾ ಘಟಕ ಅಧ್ಯಕ್ಷೆ ಚೈತ್ರಾ ಕುಲಾಲ್ ಮತ್ತು ಯುವವೇದಿಕೆ ಅಧ್ಯಕ್ಷೆ ಹರ್ಷಿತಾ ಕುಲಾಲ್, ನಾನಿಲ್ತಾರ್ ಕುಲಾಲ್ ಸಂಘದ ಅಧ್ಯಕ್ಷರು ಹಾಗೂ ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.
ಸಮೀಕ್ಷಾ ಕುಲಾಲ್ ಸನ್ಮಾನ ಪತ್ರ ವಾಚಿಸಿದರು.






