ವೇಣೂರು: ಅ.11ರಿಂದ ನಡೆಯಲಿರುವ ವಿಶ್ವಖ್ಯಾತಿಯ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂಟ್ವಾಳ ತಾಲೂಕಿನ ಮಾಣಿಲ ಶ್ರೀಧಾಮದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಗೆ ಆಹ್ವಾನ ಬಂದಿದೆ.
ಈವರೆಗೆ ಮೈಸೂರು ದಸರಾ ಕಾರ್ಯಕ್ರಮಕ್ಕೆ ಜಿಲ್ಲೆಯ ಯತಿವರ್ಯರಿಗೆ ಆಹ್ವಾನ ಇರುತ್ತಿರಲಿಲ್ಲ. ಇದೀಗ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ್ದು, ಈ ಹೊಸ ಸಂಪ್ರದಾಯದ ನಾಂದಿಗೆ ಹಿಂದೂ ಸಮಾಜ ಹರ್ಷ ವ್ಯಕ್ತಪಡಿಸಿದೆ.


ಡಿಕೆಶಿ ಸೂಚನೆಯಂತೆ ಬಂಟ್ವಾಳ ತಹಶಿಲ್ದಾರ್ ಕಚೇರಿಯಿಂದ ಸ್ವಾಮೀಜಿಯವರಿಗೆ ಕರೆ ಬಂದಿದ್ದು, ಮೈಸೂರಿಗೆ ಹೋಗಿ ಬರಲು ,ಉಳಿದುಕೊಳ್ಳಲು ಸರ್ವ ರೀತಿಯ ವ್ಯವಸ್ಥೆ ಮಾಡಿ ಕೊಡಲಾಗುವುದೆಂದು ತಿಳಿಸಿ ಮಾಹಿತಿ ಪಡೆದುಕೊಂಡಿದ್ದಾರೆನ್ನಲಾಗಿದೆ.


