ಕೈಕಂಬ: ಅನಾಧಿ ಕಾಲದಿಂದ ಆರಾದಿಸಿಕೊಂಡು ಬಂದಿರುವ ಮುತ್ತೂರು ಬೆಜ್ಜೆ ಬಂಜನ್ ಕುಟುಂಬದ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಮೊಗ ಸಮರ್ಪಣೆ ಹಾಗೂ ವೈಭವದ ನೇಮೋತ್ಸವು ಫೆ. 7 ಮತ್ತು 8ರಂದು ನಡೆಯಲಿದೆ.
ಫೆ. 7ರಂದು ಬೆಳಿಗ್ಗೆ ಗಂಟೆ 8 ರಿಂದ ಶ್ರೀ ನಾಗ ಮತ್ತು ನಾಗಬ್ರಹ್ಮ ದೇವರಿಗೆ ತಂಬಿಲಸೇವೆ, ಗಣಪತಿ ಹೋಮ, ದೈವಗಳಿಗೆ ನವಕ ಕಲಶ, ಪುನರ್ ಪ್ರತಿಷ್ಠೆ, ಮುಡಿಪು ಶುದ್ಧ ನಡೆಯಲಿದೆ. ಕುಪ್ಪೆಟ್ಟು ಪಂಜುರ್ಲಿ ದರ್ಶನದೊಂದಿಗೆ ಮೊಗ ಸಮರ್ಪಣೆ ನಡೆಯಲಿದ್ದು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.
ನೇಮೋತ್ಸವ
ಫೆ. 7ರ ಸಂಜೆ 7-00 ಗಂಟೆಯಿಂದ ಮಹಿಷಂದಾಯ, ಜುಮಾದಿ ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದೆ. ನೆರೆದಿರುವ ಭಕ್ತಾಧಿಗಳಿಗೆ ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.
ಕೋಲೋತ್ಸವ
ಫೆ. 8ರಂದು ಶ್ರೀ ಸತ್ಯದೇವತೆ (ಪೊಸಪ್ಪೆ), ಹಿರಿಯಜ್ಜ, ಕುಪ್ಪೆಟ್ಟು ಮಂತ್ರದೇವತೆ, ಕಲ್ಲುರ್ಟಿ, ಕುಪ್ಪೆಟ್ಟು ಪಂಜುರ್ಲಿ, ಸ್ಥಳದ ಕಲ್ಲುರ್ಟಿ ಪಂಜುರ್ಲಿ, ಕುಟುಂಬದ ಕಲ್ಲುರ್ಟಿ ಪಂಜುರ್ಲಿ, ಕೊರತಿ, ಗುಳಿಗ ಮತ್ತು ಒಂಟಿ ಗುಳಿಗ ದೈವಗಳಿಗೆ ಕೋಲೋತ್ಸವ ಜರಗಲಿದ್ದು, ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ. ಫೆ. 9ರ ಸಂಜೆ ಪರಿವಾರ ದೈವಗಳಿಗೆ ಪರ್ವ ಸೇವೆ ನಡೆಯಲಿದೆ ಎಂದು ಮುತ್ತೂರು ಬೆಜ್ಜೆ ಬಂಜನ್ ಕುಟುಂಬದ ಕಾರ್ಯಕಾರಿ ಸಮಿತಿ ಪ್ರಕಟಣೆ ತಿಳಿಸಿದೆ.





