ವೇಣೂರು: ಇಲ್ಲಿಯ ಕರಿಮಣೇಲು ಗ್ರಾಮದ ಗಾಂಧಿನಗರದಲ್ಲಿ ವಲೇರಿಯನ್ ಶಾಲಿನಿ ಮೊರಾಸ್ ಮಾಲಕತ್ವದ ಮೊರಾಸ್ ರೈಸ್ಮಿಲ್ ನ. 17ರಂದು ಬೆಳಿಗ್ಗೆ 10-00 ಗಂಟೆಗೆ ಶುಭಾರಂಭಗೊಳ್ಳಲಿದೆ.
ಸಮಾರಂಭದಲ್ಲಿ ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂ. ಎಡ್ವಿನ್ ಸಂತೋಷ್ ಮೋನಿಸ್ ಅವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಕ್ಷಿತ್ ಶಿವರಾಮ್, ಮಲ್ಲಿಕಾ ಕಾಶಿನಾಥ್ ಹೆಗ್ಡೆ, ಸುಂದರ ಹೆಗ್ಡೆ ಬಿಇ, ಡೆನ್ನಿಸ್ ಸಿಕ್ವೇರಾ, ಹರೀಶ್ ನಾಯ್ಕ್, ಅರುಣ್ ಕ್ರಾಸ್ತಾ, ಎ. ಜಯರಾಮ ಶೆಟ್ಟಿ, ಎನ್. ಸೀತಾರಾಮ ರೈ, ಎಚ್. ಮಹಮ್ಮದ್ ವೇಣೂರು, ಜೆರೋಮಿಯಸ್ ಮೊರಾಸ್, ಪಿ. ಧರಣೇಂದ್ರ ಕುಮಾರ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ವಲೇರಿಯನ್ ಶಾಲಿನಿ ಮೊರಾಸ್ ತಿಳಿಸಿದ್ದಾರೆ.









