ಬೆಳ್ತಂಗಡಿ: ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಬಳಂಜ ಶಿಕ್ಷಣ ಟ್ರಸ್ಟ್ (ರಿ.) ಬಳಂಜ ಇದರ ಅಧ್ಯಕ್ಷರಾಗಿ ಪತ್ರಕರ್ತ ಮನೋಹರ್ ಬಳಂಜ ಪುನರಾಯ್ಕೆಗೊಂಡಿದ್ದಾರೆ.
ಟ್ರಸ್ಟ್ನ ಸಭೆಯು ಟ್ರಸ್ಟ್ನ ಅಧ್ಯಕ್ಷ ಮನೋಹರ್ ಬಳಂಜ ಅವರ ಅಧ್ಯಕ್ಷತೆಯಲ್ಲಿ ಸ.ಉನ್ನತೀಕರಿಸಿದ ಪ್ರಾಥಮಿಕ, ಪ್ರೌಢ ಶಾಲೆ ಬಳಂಜದಲ್ಲಿ ನಡೆಯಿತು.
ಟ್ರಸ್ಟ್ ನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮನೋಹರ್ ಬಳಂಜ, ಉಪಾಧ್ಯಕ್ಷರಾಗಿ ವಿನು ಬಳಂಜ, ಕಾರ್ಯದರ್ಶಿಯಾಗಿ ರತ್ನರಾಜ ಜೈನ್ ಪೇರಂದಬೈಲು, ಕಾನೂನು ಸಲಹೆಗಾರರಾಗಿ ಸತೀಶ್ ರೈ ಬಾರ್ದಡ್ಕ, ಟ್ರಸ್ಟಿಗಳಾಗಿ ಪ್ರಮೋದ್ ಜೈನ್, ಸಂತೋಷ್ ಕುಮಾರ್ ಕಾಪಿನಡ್ಕ, ಪ್ರಶಾಂತ್ ಡಿ. ಬಳಂಜ, ರಾಕೇಶ್ ಹೆಗ್ಡೆ, ಚಂದ್ರಶೇಖರ ಪಿ.ಕೆ., ಪ್ರವೀಣ್ ಹೆಚ್.ಎಸ್., ಅನಂತರಾಮ್ ಹೊಳ್ಳ, ಸತೀಶ್ ಕೆ. ಮತ್ತು ಅಹ್ವಾತ ಟ್ರಷ್ಟ್ ಗಳಾಗಿ ಉಮಾಮಹೇಶ್ವರ ಯುವಕ ಮಂಡಲದ ಅದ್ಯಕ್ಷರ ನ್ನು, ಜ್ಯೋತಿ ಮಹಿಳಾ ಮಂಡಲದ ಅದ್ಯಕ್ಷರನ್ನು, ಬಳಂಜ ಶಾಲಾ ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷರನ್ನು ಟ್ರಸ್ಟಿಗಳಾಗಿ ಆಯ್ಕೆಮಾಡಲಾಯಿತು.
ಟ್ರಸ್ಟ್ ವತಿಯಿಂದ ದಾನಿಗಳ ಸಹಕಾರದಿಂದ, ಸತ್ಕಾರ್ಯ ಸ್ನೇಹಿತ ಬಳಗದ ನೆರವುಹಾಗೂ ಬಳಂಜಶಾಲಾ ಶಿಕ್ಷಣ ಪ್ರೇಮಿಗಳು ಹುಟ್ಟು ಹಬ್ಬ ಆಚರಣೆ, ಮನೆಯ ಶುಭಕಾರ್ಯ ಪ್ರಯುಕ್ತ ಶಿಕ್ಷಣ ನೆರವು ಡುತ್ತಿರುವ ಕಾರಣ ಅನೇಕ ಅಭಿವೃದ್ದಿ ಕಾರ್ಯಕ್ರಮ ಮಾಡಲು ಸಹಕಾರಿಯಾಗಿದ್ದು ಈ ಬಗ್ಗೆ ಚರ್ಚಿಸಲಾಯಿತು. ಶಾಲೆಗೆ ರೋಟರಿ ಕ್ಲಬ್ ವತಿಯಿಂದ 14,00,000 ರೂ ವೆಚ್ಚದ ಸೋಲಾರ್ ಅಳವಡಿಕೆ, ರಂಗ ಮಂದಿರ ಅಭಿವೃದ್ಧಿ ಇತರ ಕೆಲಸಗಳು, ಶಾಲೆಗೆ 250 ಚೇಯರ್ ಹಸ್ತಾಂತರ, 2 ವರ್ಷದಲ್ಲಿ 4 ಗೌರವ ಶಿಕ್ಷಕಿಯರ ನೇಮಕಾತಿ ಮಾಡಿ ವೇತನ ಡಿರುವುದು, ಶಾಸಕರ ಧಿಯಿಂದ 15 ಲಕ್ಷ ರೂ ವೆಚ್ಚದಲ್ಲಿ ಮಕ್ಕಳ ತಂಗುದಾಣ ರ್ಮಾಣ, ಪ್ರಾಥಮಿಕ ಹಂತದ ತಾಲೂಕು ಮಟ್ಟದ ಕ್ರೀಡೋತ್ಸವ, ಸುಮಾರು 50 ಮಕ್ಕಳಿಗೆ ಉಚಿತ ಎಲ್.ಕೆ.ಜಿ, ಯು.ಕೆ.ಜಿ. ಶಿಕ್ಷಣ, ಧ.ಗ್ರಾ ಯೋಜನೆ ನೆರವಿಂದ 6 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಂಗಣ ಅಗಲೀಕರಣ,5 ಲಕ್ಷ ರೂ. ವೆಚ್ಚದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರವರ ಅನುದಾನದಲ್ಲಿ ಕೊಠಡಿ ನವೀಕರಣ, 3 ಲಕ್ಷ ರೂ. ವೆಚ್ಚದಲ್ಲಿ ತಾ.ಪಂ. ಅನುದಾನದೊಂದಿಗೆ ಕೊಠಡಿ ನವೀಕರಣ, ಶ್ರೀ ಧ.ಮಂ. ಶಿಕ್ಷಣ ಸಂಸ್ಥೆ ಉಜಿರೆ ಇವರ ಸಹಕಾರದೊಂದಿಗೆ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, 1.20 ಲಕ್ಷ ವೆಚ್ಚದಲ್ಲಿ ಶೀಟ್ ಅಳವಡಿಕೆ, ತರಬೇತಿ ಕಾರ್ಯಾಗಾರ, ಇತರ ಅನೇಕ ಶೈಕ್ಷಣಿಕ ಚಟುವಟಿಕೆ ಮಾಡಿದ ಬಗ್ಗೆ ಸಭೆಯಲ್ಲಿ ಸಂತಸ ವ್ಯಕ್ತಪಡಿಸಲಾಯಿತು. ಇದಕ್ಕೆ ಸಹಕರಿಸಿದ ಎಲ್ಲಾ ದಾಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಮುಂದಿನ ದಿನಗಳಲ್ಲಿ ಮಂಗಳೂರು ಮೆಸ್ಕಾ ವಿಭಾಗದ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ರವರ ಸಹಕಾರದೊಂದಿಗೆ 15 ಲಕ್ಷ ರೂ. ವೆಚ್ಚದಲ್ಲಿ ಕಂಪ್ಯೂಟರ್ ಕೊಠಡಿ ರ್ಮಾಣ, ಶಾಸಕ ಹರೀಶ್ ಪೂಂಜ ರವರ ಅನುದಾನದೊಂದಿಗೆ ರಂಗ ಮಂದಿರ ರ್ಮಾಣ, ಉದ್ಯಮಿ ಶೇಖರ ದೇವಾಡಿಗ ಸಹಕಾರದೊಂದಿಗೆ ಚಿನ್ನರ ಅಂಗಣ ರ್ಮಾಣ, ಮಕ್ಕಳಿಗೆ ಅನಕೂಲಕ್ಕಾಗಿ ವಾಹನ ವ್ಯವಸ್ಥೆ, ಮುಂದೆಯೂ ಉಚಿತ ಅಂಗ್ಲ ಮಾಧ್ಯಮ ಶಿಕ್ಷಣ, ಉಚಿತ ಕಂಪ್ಯೂಟರ್ ಶಿಕ್ಷಣ, ತರಗತಿ ಕೊಠಡಿಗಳಿಗೆ ಸಿ.ಸಿ.ಕ್ಯಾಮರಾ ಅಳವಡಿಕೆ, ಶಾಲೆಗೆ ಅಗತ್ಯವಾದ ಶೌಚಾಲಯ ರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಯಿತು. ಉಪಾಧ್ಯಕ್ಷ ವಿನು ಬಳಂಜ ವಂದಿಸಿದರು.





