ಮಂಗಳೂರು: ಮಂಗಳೂರಿನ ಡಾ. ಎಂ.ವಿ. ಶೆಟ್ಟಿ ಇನ್ಸ್ಟಿಟ್ಯೂಷನ್ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಮೀಳಾ ಎಂ. ಕುಲಾಲ್ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
ಇವರು ಮಂಗಳೂರು ವಿಶ್ವವಿದ್ಯಾಲಯಕ್ಕೆ Socio Educational and Cultural Status of Coastal Karnataka Women at Colonial Period ಎಂಬ ವಿಷಯದ ಮೇಲೆ ಡಾ. ಮೀನಾಕ್ಷಿ ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದರು. ಡಾ ಪ್ರಮೀಳಾ ಎಂ. ಕುಲಾಲ್ ಅವರು ಕೊಲ್ಯ ಶ್ರೀ ಚಂದ್ರಶೇಖರ ಕುಲಾಲ್ ಅವರ ಪತ್ನಿ ಆಗಿದ್ದಾರೆ.





