ನಾರಾವಿ: ಕರು ಹಾಕಲುವಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದ ಮಲೆನಾಡ ಗಿಡ್ಡ ಹಸುವಿನ ಕರುವನ್ನು ಮಡಂತ್ಯಾರು ಇಲ್ಲಿನ ಹಿರಿಯ ಪಶು ವೈದ್ಯಾಧಿಕಾರಿ ಡಾ. ವಿನಯ ಕುಮಾರ್ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
ಕುತ್ಲೂರು ಗ್ರಾಮದ ನಿವಾಸಿಯೋರ್ವರ ಮನೆಯ ಹಸುವಿಗೆ ಕರು ಹಾಕಲು ಸಮಸ್ಯೆ ಕಂಡು ಬಂದಾ ಡಾ. ವಿನಯ ಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ. ತಕ್ಷಣ ಆಗಮಿಸಿದ ಡಾ. ವಿನಯ ಕುಮಾರ್ ಅವರು ಶಸ್ತ್ರಚಿಕಿತ್ಸೆ ನಡೆಸಿ ಕರುವನ್ನು ಹೊರತೆಗೆದು ಹಸುವನ್ನು ರಕ್ಷಿಸಿದ್ದಾರೆ. ಡಾ ವಿನಯ ಕುಮಾರ್ ಎಸ್.ಎಂ ಅವರ ಜೊತೆ ಸಿಬ್ಬಂದಿಗಳಾದ ಸದಾಶಿವ ಭಟ್ ಮತ್ತು ರಮೇಶ್ ಇವರು ಶಸ್ತ್ರಚಿಕಿತ್ಸೆಗೆ ಸಹಕರಿಸಿದರು.









