ಕಾಸರಗೋಡು: ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.)ಮಂಜೇಶ್ವರ ತೂಮಿನಾಡು ಇದರ 17ನೇ ಕುಲಾಲ ಆಸರೆ ತುರ್ತು ಸಹಾಯ ಹಸ್ತ ಯೋಜನೆಯಡಿ ಕುಲಾಲ ಸಂಘ ಪುತ್ತಿಗೆ ಶಾಖೆಗೊಳಪಟ್ಟ ಎಯ್ಯೂರಿನ ರಾಜೇಶ್ ಕುಲಾಲ್ ರವರ ಪತ್ನಿ ಶ್ರೀಮತಿ ರುಕ್ಮಿಣಿ ರವರ ಚಿಕಿತ್ಸೆಗೆಗಾಗಿ ರೂ. 15,000/- ಮೊತ್ತದ ಚೆಕ್ ನ್ನು ಜಿಲ್ಲಾ ಸಂಘದ ಪ್ರಧಾನ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಮಂಜೇಶ್ವರ ಕುಲಾಲ ಪಂಚಾಯತ್ ಶಾಖೆಯ ಅಧ್ಯಕ್ಷರಾದ ಗೋಪಾಲ ಸಾಲ್ಯಾನ್ ಕಣ್ವತೀರ್ಥ, ಪುತ್ತಿಗೆ ಕುಲಾಲ ಪಂಚಾಯತ್ ಶಾಖೆಯ ಗೌರವಾಧ್ಯಕ್ಷರಾದ ಅಮ್ಮು ಮಾಸ್ಟರ್ ಅಂಗಡಿಮೊಗರು, ಜಿಲ್ಲಾ ಕುಲಾಲ ಸಂಘದ ಕೋಶಾಧಿಕಾರಿ ಈಶ್ವರ್ ಕಣ್ವತೀರ್ಥ, ಜಿಲ್ಲಾ ಸಂಘದ ಜತೆ ಕಾರ್ಯದರ್ಶಿ ಭೋಜ ಮಾಸ್ಟರ್ ಪಾವೂರು, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ತಾರಾನಾಥ ಕಣ್ವತೀರ್ಥ, ಆನಂದ ಕಣ್ವತೀರ್ಥ, ಪ್ರಸಾದ್ ತೂಮಿನಾಡು, ಉದಯ ಕುಮಾರ್ ಕಣ್ವತೀರ್ಥ, ಸುರೇಶ್ ಹಾಗೂ ಮತ್ತಿತರರು ಜೊತೆಗಿದ್ದರು.
ಯೋಜನೆಯ ಯಶಸ್ವಿಗೆ ಸಹಕರಿಸಿದ ಸಹೃದಯ ಕುಲಾಲ ಬಂಧುಗಳಿಗೆ ಕಾಸರಗೋಡು ಜಿಲ್ಲಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.



