ಸಭಾಪತಿ ಯು.ಟಿ. ಖಾದರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ಡಾ. ಎಂ. ಮೋಹನ ಆಳ್ವ ಸೇರಿದಂತೆ ಹಲವು ಗಣ್ಯರ ಆಗಮನ
ವೇಣೂರು: ವೇಣೂರು-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಹೊಸಂಗಡಿ ಗ್ರಾಮದ ಪೆರಿಂಜೆಯ ಶ್ರೀಮತಿ ದೇವಕಿ ಬಿಸಿನೆಸ್ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ನಿರ್ಮಿಸಲಾದ ಎಚ್.ಪಿ. ಪೆಂಟ್ರೋಲ್ ಬಂಕ್ ಇದರ ಉದ್ಘಾಟನೆಯು ನ. ೨೮ರಂದು ಅಪರಾಹ್ನ 3-00 ಗಂಟೆಗೆ ನಡೆಯಲಿದೆ.
ಡಾ. ಪದ್ಮಪ್ರಸಾದ ಅಜಿಲರು ತಿಮ್ಮಣ್ಣರಸರು, ಅಳದಂಗಡಿ ಅರಮನೆ, ಎ. ಜೀವಂಧರ ಕುಮಾರ್ಅನುವಂಶೀಯ ಆಡಳಿತದಾರರು, ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ, ಪೆರಿಂಜೆ ಹಾಗೂ ಶ್ರೀಮತಿ ಪ್ರಸನ್ನ ಆರ್. ಹೆಗ್ಡೆ ಪೆರಿಂಜೆಗುತ್ತು ಅವರು ದೀಪ ಪ್ರಜ್ವಲನ ಮಾಡಲಿದ್ದಾರೆ.
ನೂತನ ಸಂಸ್ಥೆಯ ಉದ್ಘಾಟನೆಯನ್ನು ಯು.ಟಿ. ಖಾದರ್ ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ, ನಳಿನ್ ಕುಮಾರ್ ಕಟೀಲ್ ಮಾಜಿ ಸಂಸದರು, ಮಂಗಳೂರು, ನವೀನ್ ಕುಮಾರ್ ಎಂ.ಜಿ. ಡಿಜಿಎಂ, ಎಚ್ಪಿಸಿಎಲ್, ಮಂಗಳೂರು ವಲಯ, ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಉದ್ಘಾಟಿಸಲಿದ್ದಾರೆ.
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ಯು. ರಾಜೇಶ್ ನಾಕ್,ಉಮಾನಾಥ ಎ. ಕೋಟ್ಯಾನ್, ಶಾಸಕರು ಮೂಡಬಿದ್ರೆ, ವಿಶ್ವನಾಥ್ ಆತ್ಮರಾಮ್, ಬೋಯಿರ್ ಶಾಸಕರು, ಕಲ್ಯಾಣ್ ಪಶ್ಚಿಮ, ಮುಂಬೈ, ಮಿಥುನ್ ರೈ, ಕಾರ್ಯದರ್ಶಿ, ಕೆಪಿಸಿಸಿ, ಶ್ರೀ ರವಿ ಎಸ್. ಶೆಟ್ಟಿ, ಶ್ರೀ ರಾಧಾ ಮೆಡಿಕಲ್ಸ್ & ಶ್ರೀ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್, ಶಶಿಧರ ಶೆಟ್ಟಿ ಬರೋಡಾ ಶಶಿ ಕ್ಯಾಟರರ್ಸ್, ಪ್ರಭುನಾಥ್ ಆತ್ಮರಾಮ್ ಬೊಯಿರ್, ಮಾಜಿ ಕಾರ್ಪೊರೇಟರ್, ಸಂಘಟಕ, ಶಿವಸೇನೆ, ಮುಂಬೈ, ಇಶಿತಾ ಗಾರ್ಗ್ ವಲಯ ಮಾರಾಟ ಅಧಿಕಾರಿ, ಎಚ್ಪಿಸಿಎಲ್ ಮಂಗಳೂರು ವಲಯ, ಪ್ರಭಾತ್ ಶ್ರೀವಾಸ್ತವ್ ಮುಖ್ಯ ಅಭಿಯಂತರರು, ಎಚ್ಪಿಸಿಎಲ್ ಮಂಗಳೂರು ವಲ, ಜಯವಾಂತ್ ಬೊಯೆರ್, ಮಾಜಿ ಕಾರ್ಪೋರೇಟರ್ ಕ,ಣ್ ಪಶ್ಚಿಮ, ಮುಂಬೈ, ವಿಕಾಸ್ ಜೈನ್ ರಿಟ್ಝ್ ಡೆವಲಪರ್ಸ್, ಕಲ್ಯಾನ್ ಮುಂಬೈ, ರೆ.ಫಾ. ಎಡ್ವಿನ್ ಸಂತೋಷ್ ಮೋನಿಸ್, ಕ್ರಿಸ್ತರಾಜ ದೇವಾಲಯ ವೇಣೂರ, ಎಚ್. ಆಲಿಯಬ್ಬ ಅಧ್ಯಕ್ಷರು, ಜುಮ್ಮಾ ಮಸೀದಿಗೆ ಪುಲಾಬೆ, ಶ್ರೀ ಜಗದೀಶ್ ಹೆಗ್ಡೆ ಅಧ್ಯಕ್ಷರು, ಗ್ರಾ.ಪಂ., ಹೊಸಂಗಡಿ ಭಾಗವಹಿಸಲಿದ್ದಾರೆ ಎಂದು ರೇವತಿ ಎಂಟರ್ ಪ್ರೈಸಸ್ನ ಮಾಲಕರುಗಳಾದ ಶ್ರೀಮತಿ ದೇವಿಕಾ ವಿ. ಶೆಟ್ಟಿ, ವಿಶ್ವನಾಥ ಎಸ್. ಶೆಟ್ಟಿ ಮತ್ತು ಶ್ರೀಮತಿ ರೇವತಿ ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.
ಯಕ್ಷಗಾನ ಬಯಲಾಟ
ರಾತ್ರಿ 6-30ರಿಂದ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ವರದಿ: ಎಚ್. ಮಹಮ್ಮದ್ ವೇಣೂರು (ನಿವೃತ್ತ ಪ್ರಬಂಧಕರು, ಸಿಎ ಬ್ಯಾಂಕ್ ವೇಣೂರು)









