ವೇಣೂರು: ವೇಣೂರು ಗ್ರಾ.ಪಂ. ವ್ಯಾಪ್ತಿಯ ಮೂಡುಕೋಡಿಯ ನಡ್ತಿಕಲ್ಲು-ಪರಾರಿ ರಸ್ತೆಯ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ವೇಣೂರು ಗ್ರಾ.ಪಂ. ಸದಸ್ಯರು ಶಾಸಕ ಹರೀಶ್ ಪೂಂಜ ಅವರನ್ನು ಆಗ್ರಹಿಸಿದ್ದಾರೆ.
ಭೇಟಿಯ ನಿಯೋಗದಲ್ಲಿದ್ದ ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು, ಸದಸ್ಯರುಗಳಾದ ಸುಂದರ ಹೆಗ್ಡೆ ಬಿ.ಇ. ಹಾಗೂ ಹರೀಶ್ ಪಿ.ಎಸ್. ಅವರಿಗೆ ಮುಂದಿನ ಜೂನ್ ಸಮಯದೊಳಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ಮೂಡುಕೋಡಿಯ ನಡ್ತಿಕಲ್ಲು-ಪರಾರಿಯ ಏರಿಳಿತ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರಿಂದ ಬೇಡಿಕೆ ಬಂದಿತ್ತು. ಈ ಬಗ್ಗೆ ಪಂಚಾಯತು ಆಡಳಿತ ಮಂಡಳಿ 1.50 ಲಕ್ಷ ಅನುದಾನವನ್ನು ಇರಿಸಿತ್ತು. ಆದರೆ ಇದೀಗ ಶಾಸಕರು ರಸ್ತೆ ಅಭಿವೃದ್ದಿಗೆ ಅನುದಾನದ ಒದಗಿಸುವ ಭರವಸೆಯನ್ನು ಪಂಚಾಯತು ಸದಸ್ಯರಿಗೆ ನೀಡಿದ್ದು, ಪಂಚಾಯತು ಮೀಸಲಿರಿಸಿದ್ದ ರೂ. 1.50ಲಕ್ಷ ಅನುದಾನ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಿದೆ ಅನ್ನುವ ಮಾಹಿತಿ ಲಭ್ಯವಾಗಿದೆ.





