ಬೆಳ್ತಂಗಡಿ: ತಾಲೂಕಿನಲ್ಲಿ ಜಮೀನು ಹೊಂದಿರುವ ರೈತರಿಗೆ FID ಹಾಗೂ EKYCಯನ್ನು ಮಾಡಿಸಿಕೊಳ್ಳಲು ದಿನಾಂಕ: 23-06-2026ರಂದು ಮಾನ್ಯ ದಕ್ಷಿಣ ಕನ್ನಡ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಬೆಳ್ತಂಗಡಿ ತಾಲೂಕಿನ 81 ಕಂದಾಯ ಗ್ರಾಮಗಳಲ್ಲಿ 43 ಗ್ರಾಮಗಳ EKYC ಮಾಡಲು ತೋಟಗಾರಿಕೆ ಇಲಾಖೆಗೆ ಹಾಗೂ 38 ಗ್ರಾಮಗಳನ್ನು ಕೃಷಿ ಇಲಾಖೆಗೆ ವಹಿಸಿರುತ್ತಾರೆ.
ಅದರಂತೆ ತೋಟಗಾರಿಕೆ ಇಲಾಖೆಗೆ ವಹಿಸಿರುವ ಬೆಳ್ತಂಗಡಿ ಹೋಬಳಿಯಲ್ಲಿನ 15 ಗ್ರಾಮಗಳು, ಕೊಕ್ಕಡ ಹೋಬಳಿಯಲ್ಲಿನ 13 ಗ್ರಾಮಗಳು ಹಾಗೂ ವೇಣೂರು ಹೋಬಳಿಯಲ್ಲಿನ 15 ಗ್ರಾಮಗಳ ರೈತರು RTC ನಕಲು, ಬ್ಯಾಂಕ್ ಖಾತೆ ನಕಲು, ಆಧಾರ್ ಕಾರ್ಡ್ ನಕಲು ಹಾಗೂ ಆಧಾರ್ ನಲ್ಲಿ ನಮೂದಿಸಿರುವ ಮೊಬೈಲ್ ಅನ್ನು ತೆಗೆದುಕೊಂಡು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಬೆಳ್ತಂಗಡಿ ಕಛೇರಿಗೆ ಖುದ್ದಾಗಿ ಹಾಜರಾಗಿ FID ಹಾಗೂ EKYC ಯನ್ನು ಮಾಡಿಸಿಕೊಳ್ಳಲು ಕೋರಿದೆ ಹಾಗೂ ಉಳಿದ ಗ್ರಾಮದ ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಲು ಪ್ರಕಟಣೆ ನೀಡಲಾಗಿದೆ.
ಲಗತ್ತು : FID ಹಾಗೂ EKYC ಯನ್ನು ಮಾಡಿಸಿಕೊಳ್ಳಲು ಹೋಬಳಿವಾರು ಗ್ರಾಮಗಳ ವಿವರದ ಪ್ರತಿ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಅಧಿಕಾರಿ ವರ್ಗದವರನ್ನು ಸಂಪರ್ಕಿಸಲು ಕೋರಿದೆ.
ಬೆಳ್ತಂಗಡಿ & ಕೊಕ್ಕಡ ಹೋಬಳಿ : ಶ್ರೀ ಮಹಾವೀರ ಶೇಬಣ್ಣವರ ನೇ. , ಮೊಬೈಲ್ ನಂ: 8123921087
ವೇಣೂರು ಹೋಬಳಿ : ಶ್ರೀ ಭೀಮರಾಯ ಸೊಡ್ಡಗಿ, ಮೊಬೈಲ್ ನಂ: 9741713598
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : ಕೆ.ಎಸ್. ಚಂದ್ರಶೇಖರ್, ಮೊಬೈಲ್ ನಂ: 9448336863



