ವೇಣೂರು: ಯುವವಾಹಿನಿ (ರಿ.) ವೇಣೂರು ಘಟಕದ ಮಾಸಿಕ ಸಭೆ ಮತ್ತು ಬೆಳಕು ಕಾರ್ಯಕ್ರಮ ಇತ್ತೀಚೆಗೆ ಘಟಕದ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್ ನಾರಾವಿ ಇವರ ಅಧ್ಯಕ್ಷತೆಯಲ್ಲಿ ಪೇರಿ – ಹೊಸಂಗಡಿ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ಸದಸ್ಯತ್ವ ಮತ್ತು ಆಸರೆ ಯೋಜನೆಯ ಬಗ್ಗೆ ಚರ್ಚಿಸಿ ಬಡ ಕುಟುಂಬದ ವಿದ್ಯಾರ್ಥಿಗೆ ಸಹಾಯಧನ ಕೊಡುವುದುದೆಂದು ನಿರ್ಧರಿಸಲಾಯಿತು. ಘಟಕದ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್ ಮಾತಾಡಿ ಮುಂದಿನ ಕಾರ್ಯಕ್ರಮಗಳ ಪಟ್ಟಿಯನ್ನು ಸಭೆಯ ಮುಂದಿಟ್ಟರು.
ಘಟಕದ ಸ್ಥಾಪಕ ಅಧ್ಯಕ್ಷರಾದ ನಿತೀಶ್ ಹೆಚ್. ಸದಸ್ಯತ್ವದ ಬಗ್ಗೆ ಮಾತನಾಡಿ, ಘಟಕದ ಪ್ರಸಕ್ತ, ಮಾಜಿ ಹಾಗೂ ಆಸಕ್ತ ನೂತನ ಸದಸ್ಯರು ಸೇರ್ಪಡೆಯಾಗಿ ಸದಸ್ಯತ್ವವನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಮಾಡಬೇಕೆಂದು ಮನವಿ ಮಾಡಿ ಘಟಕದ ಮುಂದಿನ ಕಾರ್ಯಕ್ರಮಗಳಿಗೆ ಶುಭಾಶಯ ಕೋರಿದರು.

ಉಚಿತ ವಿದ್ಯುತ್ ಸಂಪರ್ಕಕ್ಕೆ ಚಾಲನೆ
ಘಟಕದ ಕೋಶಾಧಿಕಾರಿಯಾಗಿರುವ ಸತೀಶ್ ಚಿಗುರು ಇವರ ಪ್ರಾಯೋಜಕತ್ವದಲ್ಲಿ ಕೊಡಮಾಡಲ್ಪಟ್ಟ ಶ್ರೀಮತಿ ಬೇಬಿ ಪೇರಿ -ಹೊಸಂಗಡಿ ಬೆಳ್ತಂಗಡಿ ತಾಲೂಕು ಇವರ ಮನೆಗೆ ಉಚಿತ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಲಾಯಿತು.
ಘಟಕದ ಮಾಜಿ ಅಧ್ಯಕ್ಷರುಗಳಾದ ನವೀನ್ ಪಚ್ಚೇರಿ, ಅರುಣ್ ಕೋಟ್ಯಾನ್, ಶುಭಕರ ಪೂಜಾರಿ ಸಾವ್ಯ ಮತ್ತು ವೇಣೂರು ಬಿಲ್ಲವ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಪೊಕ್ಕಿ, ಘಟಕದ ಸಲಹೆಗಾರರಾದ ರಾಕೇಶ್ ಕುಮಾರ್ ಮೂಡುಕೋಡಿ, ಘಟಕದ ನಿರ್ದೇಶಕರುಗಳಾದ ಸುಜಿತ್ ಕುಮಾರ್, ಪ್ರವೀಣ್ ಕೋಟ್ಯಾನ್ ನಾರಾವಿ, ಮಹಿಳಾ ನಿರ್ದೇಶಕರುಗಳಾದ ಗುಣವತಿ ಡಿ, ಜಯಂತಿ ಹಾಗೂ ಪದಾಧಿಕಾರಿಗಳ ಉಪಸ್ಥಿತಿ ಯಲ್ಲಿ ಚಾಲನೆಯನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು.
ಸನ್ಮಾನ
ಘಟಕದ ಕೋಶಾಧಿಕಾರಿಯಾದ ಸತೀಶ್ ಚಿಗುರು ಇವರನ್ನು ಪೇರಿ -ಹೊಸಂಗಡಿ ಶ್ರೀ ಶಾರದಾಂಭ ಭಜನ ಮಂದಿರದ ಪರವಾಗಿ ಸನ್ಮಾನಿಸಿದರು. ಅಧ್ಯಕ್ಷರಾದ ಆನಂದ್ ಬಂಗೇರ ಮತ್ತು ಕಾರ್ಯದರ್ಶಿ ಸುಜಿತ್ ಕುಮಾರ್ , ಸದಸ್ಯರಾದ , ರಶ್ಮಿ ಹರಿಪ್ರಸಾದ್, ಸಂಗಮ್ ಪೇರಿ, ಸೂರಜ್ ಪೇರಿ, ಅಂಕಿತ್ ಬಂಗೇರ ಕೊಡಿಂಗೇರಿ, ಬಾಬು ಕೋಟ್ಯಾನ್, ಸನತ್, ಸಂದೀಪ್, ಸಂದೇಶ್ ಉಪಸ್ಥಿತರಿದ್ದರು.
ಘಟಕದ ವ್ಯಕ್ತಿತ್ವ ವಿಕಾಸನ ನಿರ್ದೇಶಕರಾದ ಸುಜಿತ್ ಕುಮಾರ್ ಸ್ವಾಗತಿಸಿ, ಘಟಕದ ಕಾರ್ಯದರ್ಶಿ ಶ್ರೀಮತಿ ದಕ್ಷಾ ಅಂಬಲ ರವರು ಧನ್ಯವಾದ ಅರ್ಪಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಲಘು ಉಪಹಾರವನ್ನು ಪೇರಿ ಭಜನಾ ಮಂದಿರದ ಪರವಾಗಿ ನೀಡಿ ಸಹಕರಿಸಿದರು.



