ಬಂಟ್ವಾಳ: ಲಯನ್ಸ್ ಕ್ಲಬ್, ರಾಯಿ-ಸಿದ್ಧಕಟ್ಟೆ ಶ್ರೀ ಶಾರದೋತ್ಸವ ಸಮಿತಿ, ಸಿದ್ಧಕಟ್ಟೆ ಮತ್ತು ಊರ ದಾನಿಗಳ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಿದ್ಧಕಟ್ಟೆ ಪರಿಸರಕ್ಕೆ ಅತೀ ಅಗತ್ಯವಿರುವ ಅಂಬುಲೆನ್ಸ್ ವಾಹನ ಲೋಕಾರ್ಪಣೆ ಕಾರ್ಯಕ್ರಮವು ಅತಿಥಿ ಗಣ್ಯರ ಸಮ್ಮುಖದಲ್ಲಿ ‘ಸಿದ್ಧಕಟ್ಟೆ ಫಲ್ಗುಣಿ ಕಾಂಪ್ಲೆಕ್ಸ್’ ಮುಂಭಾಗದಲ್ಲಿ ನ.9 ರಂದು ನಡೆಯಿತು.
ಮಾಜಿ ಸಚಿವ ರಮಾನಾಥ ರೈಯವರು ಅಂಬುಲೆನ್ಸ್ ವಾಹನ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು. ಲಯನ್ಸ್ ನ ಪ್ರಮುಖರಾದ ಅಮ್ಟೂರು ಕ್ಲಬ್ ನ ನೋಯೆಲ್ ಹಾಗೂ ವಿಸ್ತರಣಾ ಅಧಿಕಾರಿ ಜೋನ್ ಸಿರಿಲ್ ಡಿ ಕೋಸ್ಟಾ ಶುಭ ಕೋರಿದರು. ಇದೇ ವೇಳೆ 3 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು.
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿಕುಂದರ್, ಕೋಡಂಗೆ ಕಂಬಳ ಸಮಿತಿಯ ಅಧ್ಯಕ್ಷ ಸಂದೀಪ್ ಶೆಟ್ಟಿ , ಕಾರ್ಯದರ್ಶಿ ಶಶಿಧರ್ ಶೆಟ್ಟಿ, ಸಿದ್ಧಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಮಂಜಿಲ ಸಿದ್ಧಕಟ್ಟೆಯ ಹಿರಿಯರು ಪ್ರಖ್ಯಾತ ವೈದ್ಯ ಡಾ.ಪ್ರಭಾಚಂದ್ರ ಜೈನ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ರಮೇಶ್ ನಾಯಕ್ ರಾಯಿ, ಶಾರದೋತ್ಸವ ಸಮಿತಿಯ 2026 ಸಾಲಿನ ನಿಯೋಜಿತ ಅಧ್ಯಕ್ಷ ಉದ್ಯಮಿ ನೊಣಯ್ಯ ಶೆಟ್ಟಿಗಾರ್, ಮುಜುಲ್ನಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಕುತ್ಲೊಡಿ, ದೇವಪ್ಪ ಕರ್ಕೇರ, ಉಮೇಶ್ ಹಿಂಗಾಣಿ, ರೋಟರಿ ಕ್ಲಬ್ ಅಧ್ಯಕ್ಷ ದುರ್ಗದಾಸ್ ಶೆಟ್ಟಿ ಕರೆಂಕಿಜೆ. ಲೊರೆಟ್ಟೊ ಕ್ಲಬ್ ನ ಪೆಲಿಕ್ಸ್ ಲೋಬೊ, ಅನಿಲ್ ಪ್ರಭು ರಾಯಿ, ಗೋಪಾಲ್ ಬಂಗೇರಾ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಚಂದ್ರಶೇಖರ್ ಬೈದಾಗುತ್ತು ,ಕೋಶಾಧಿಕಾರಿ ದಾಮೋದರ ಪೂಜಾರಿ ದೋಟ, ಉಪಸ್ಥಿತರಿದ್ದರು.
ಅಧ್ಯಕ್ಷರಾದ ಚಂದಪ್ಪ ಮೂಲ್ಯ ಸ್ವಾಗತಿಸಿದರು, ನಿಕಟಪೂರ್ವ ಅಧ್ಯಕ್ಷ ಜಗದೀಶ್ ಕೊಯ್ಲ ಪ್ರಸ್ತಾವನೆಗೈದರು, ಅರುಣ್ ಮಂಜಿಲಾ ಧನ್ಯವಾದ ನೀಡಿದರು, ಸಹಕರಿಸಿ ದೇಣಿಗೆ ನೀಡಿದ ದಾನಿಗಳಿಗೆ ಹಾಗೂ ಸದಸ್ಯರಿಗೆ ನಮ್ಮ ಲಯನ್ಸ್ ಕ್ಲಬ್ ನ ಪರವಾಗಿ ಧನ್ಯವಾದಗಳನ್ನು ಸಲ್ಲಿಸಲಾಯಿತು.









