ಯುವ ನಟಿಯರನ್ನು ಕನ್ನಡ ಸಿನಿ ರಂಗಕ್ಕೆ ಪರಿಚಯಿಸಿದ ವಿಭಿನ್ನ ಕಾರ್ಯಕ್ರಮವೇ ಮಹಾನಟಿ ಸೀಸನ್ -2. ಇದೇ ಶನಿವಾರ ಮತ್ತು ಭಾನುವಾರ ಫಿನಾಲೆ ನಡೆದಿದೆ.

ಅಂತೂ ವಿನ್ನರ್ ಅನೌನ್ಸ್ ಆಗಿದೆ. ಇದೀಗ ಮಹಾನಟಿ ಸೀಸನ್-2ರ ವಿಜೇತರಾಗಿ ಮಂಗಳೂರಿನ ವಂಶಿ ಹೊರಹೊಮ್ಮಿದ್ದಾರೆ. ಮಾನ್ಯ ರಮೇಶ್, ವರ್ಷಾ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಫೈನಲಿಸ್ಟ್ಗಳಾಗಿದ್ದರು.
ಮಹಾನಟಿ ಸೀಸನ್- ಮಂಗಳೂರಿನ ವಂಶಿ ರತ್ನಾಕರ್ ವಿಜಯಶಾಲಿಯಾಗಿದ್ದಾರೆ. ವೈಟ್ಗೋಲ್ಡ್ ವತಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ ಸಿಕ್ಕಿದೆ. ಆಮಂತ್ರಣ ಪರಿವಾರದಲ್ಲಿ ಗುರುತಿಸಿಕೊಂಡಿರುವ ವಂಶಿ ಅಳದಂಗಡಿ ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೀಗ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ವಂಶಿ ಅವರನ್ನು ಅಭಿನಂದಿಸಿದ್ದಾರೆ.
ಮಹಾನಟಿ ಸೀಸನ್-2ರ ಮೊದಲ ರನ್ನರ್ ಅಪ್ ಬೆಳಗಾವಿಯ ವರ್ಷಾ ಆಗಿದ್ದಾರೆ. ಅವರಿಗೆ ಜಾರ್ ಆ್ಯಪ್ ವತಿಯಿಂದ 10 ಲಕ್ಷ ರೂ.ಗಳ ನಗದು ಬಹುಮಾನ ಸಿಕ್ಕಿದೆ. ಮಹಾನಟಿ ಸೀಸನ್-2ರ ಎರಡನೇ ರನ್ನರ್ ಅಪ್ ಮೈಸೂರಿನ ಶ್ರೀಯ ಅಗಮ್ಯ ಅವರಿಗೆ ಸಿಕ್ಕಿದೆ.




